![[ಸುಳ್ ಸುದ್ದಿ ]ಪೆಟ್ರೋಲ್ ಹಂಚಲು ಮುಂದಾದ ರಾಜಕಾರಣಿಗಳು](https://static.asianetnews.com/images/w-412,h-232,imgid-b66feb04-e35c-4071-85ba-a83916535284,imgname-image.jpg)
ಬೆಂಗಳೂರು : ಚುನಾವಣೆ ಸಮೀಪಿಸುತ್ತಿರುವಂತೆ ಮತದಾರರಿಗೆ ವಿವಿಧ ಆಮಿಷಗಳನ್ನು ಒಡ್ಡಲು ರಾಜಕಾರಣಿಗಳು ಮುಂದಾಗುತ್ತಿದ್ದಾರೆ. ಅದೇ ರೀತಿ, ಅವರಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಕೂಡ ಶತಪ್ರಯತ್ನ ಮಾಡುತ್ತಿದೆ.
ಹೀಗಾಗಿ ಹಣ ಹಾಗೂ ಹೆಂಡ ಹಂಚಿದರೆ ಸಿಕ್ಕಿಬೀಳುತ್ತೇವೆ ಎಂದು ಆತಂಕಗೊಂಡಿರುವ ರಾಜಕಾರಣಿಗಳು ಈ ಬಾರಿಯ ಚುನಾವಣೆಯಲ್ಲಿ ಪೆಟ್ರೋಲ್ ಹಂಚಲು ನಿರ್ಧರಿಸಿದ್ದಾರೆ. ಪೆಟ್ರೋಲ್ ಬೆಲೆ ಬಹಳ ದುಬಾರಿಯಾಗಿರುವುದರಿಂದ ಜನರು ಪೆಟ್ರೋಲ್ ಖರೀದಿಸಲು ಕಷ್ಟಪಡುತ್ತಿದ್ದಾರೆ.
ಹೀಗಾಗಿ ಒಬ್ಬೊಬ್ಬರಿಗೂ ನಾಲ್ಕೈದು ಲೀಟರ್ ಪೆಟ್ರೋಲ್ ಹಂಚಿದರೆ ಖುಷಿಯಿಂದ ಮತ ಹಾಕುತ್ತಾರೆ ಎಂಬ ಲೆಕ್ಕಾಚಾರ ರಾಜಕಾರಣಿಗಳದು. ಇದಕ್ಕಾಗಿ ಚುನಾವಣೆ ಮುಗಿಯು ವವರೆಗೆ ಒಂದೊಂದು ಪೆಟ್ರೋಲ್ ಬಂಕ್‌ಗಳನ್ನೇ ಗುತ್ತಿಗೆ ಪಡೆಯಲು ಕೆಲ ಅಭ್ಯರ್ಥಿಗಳು ಮುಂದಾಗಿ ದ್ದಾರೆಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.