![[ಸುಳ್ ಸುದ್ದಿ] ಗಂಡು ಹೆಣ್ಣಿನ ಜಾತಕದ ಜೊತೆ ಆಧಾರ್-ಪಾನ್ ಹೊಂದಿದರಷ್ಟೇ ಮದುವೆ](https://static.asianetnews.com/images/w-412,h-232,imgid-ee2ab8be-1b8f-465a-9365-88bd18253d5a,imgname-image.jpg)
ಆಧಾರ್ ಸಂಖ್ಯೆಯನ್ನು ಪಾನ್‌ನೊಂದಿಗೆ ಸಂಯೋಜಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ ಬೆನ್ನಲ್ಲೇ, ಇನ್ನೊಂದು ಮಹತ್ವದ ಆದೇಶ ಹೊರಡಿಸಿದೆ. ಅದೇನೆಂದರೆ, ಗಂಡು ಹೆಣ್ಣಿನ ಜಾತಕದ ಜತೆ ಪಾನ್ ಮತ್ತು ಆಧಾರ್ ಕಾರ್ಡ್ ಕೂಡ ಹೊಂದಾಣಿಕೆ ಆಗಬೇಕು. ಇಲ್ಲವಾದರೆ ಮದುವೆ ಆಗುವಂತೆ ಇಲ್ಲ. ಇದಕ್ಕೆಂದೇ ಆ್ಯಪ್‌ವೊಂದನ್ನು ಸಿದ್ಧಪಡಿಸಲಾಗಿದೆ.
ಆಧಾರ್ ಮತ್ತು ಪಾನ್ ನಂಬರ್ ಹೊಂದಿಕೆ ಆಗಿದ್ದಕ್ಕೆ ಪ್ರಮಾಣಪತ್ರ ಲಭ್ಯವಾಗಲಿದೆ. ಅದನ್ನು ತಾಲೂಕು, ಜಿಲ್ಲಾ ಕಚೇರಿಗಳಲ್ಲಿ ತೋರಿಸಿ ಸೀಲ್ ಹಾಕಿಸಿಕೊಳ್ಳಬೇಕು. ಈ ಪ್ರಮಾಣಪತ್ರವನ್ನು ಮದುವೆ ಮಂಟಪದ ಮುಂದೆ ದೊಡ್ಡದಾಗಿ ಪ್ರದರ್ಶಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಒಂದು ವೇಳೆ ಪಾನ್- ಆಧಾರ್ ಸಂಯೋಜನೆಗೊಳ್ಳದೇ ಇದ್ದರೆ ಮದುವೆ ಬಳಿಕ ರಿಜಿಸ್ಪ್ರೇಷನ್ ಮಾಡಿಸಲು ಸುದೀರ್ಘ ಪ್ರಕ್ರಿಯೆ ಪಾಲಿಸಬೇಕಾಗುತ್ತದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.