ಇದು ಸುಳ್ಳು ಸುದ್ದಿ: ಕೇರಳದ ನೀರು ಆಮದು ಮಾಡಿಕೊಳ್ಳಲು ಯುಎಇ 700 ಕೋಟಿ ರು. ಒಪ್ಪಂದ?

By Web DeskFirst Published Aug 23, 2018, 1:15 PM IST
Highlights

ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಸಂಯುಕ್ತ ಅರಬ್‌ ಸಂಸ್ಥಾನ 700 ಕೋಟಿ ರು. ನೆರವು ನೀಡಿದೆ ಎಂದು ಸುದ್ದಿಯಾಗಿದೆ. ಆದರೆ, ಕೇರಳದಿಂದ ನೀರು ಆಮದು ಮಾಡಿಕೊಳ್ಳಲು ಅಬುಧಾಬಿ ನೀಡುತ್ತಿರುವ ಹಣ ಇದಾಗಿದೆ.

ಅಬುಧಾಬಿ :  ಕೇರಳ ಪ್ರವಾಹ ಸಂತ್ರಸ್ತರಿಗಾಗಿ ಸಂಯುಕ್ತ ಅರಬ್‌ ಸಂಸ್ಥಾನ 700 ಕೋಟಿ ರು. ನೆರವು ನೀಡಿದೆ ಎಂದು ಸುದ್ದಿಯಾಗಿದೆ. ಆದರೆ, ಕೇರಳದಿಂದ ನೀರು ಆಮದು ಮಾಡಿಕೊಳ್ಳಲು ಅಬುಧಾಬಿ ನೀಡುತ್ತಿರುವ ಹಣ ಇದಾಗಿದೆ. 

ಕೇರಳದಿಂದ ಹಡಗಿನ ಮೂಲಕ ಪ್ರತಿನಿತ್ಯ ಬ್ಯಾರಲ್‌ಗಟ್ಟಲೆ ನೀರು ಪೂರೈಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಇದಕ್ಕೆ ಭಾರತ ಸರ್ಕಾರ ವಿರೋಧಿಸಬಹುದು ಎಂಬ ಕಾರಣಕ್ಕೆ ಈ ವಿಷಯವನ್ನು ಮಚ್ಚಿಟ್ಟು, ಕೇರಳಕ್ಕೆ ನೆರವು ನೀಡುತ್ತಿರುವುದಾಗಿ ತಿಳಿಸಲಾಗಿದೆ.

ಅಬುಧಾಬಿ, ದುಬೈ ಮತ್ತಿತರ ಗಲ್‌್ಫ ದೇಶಗಳಲ್ಲಿ ನೀರಿಗೆ ಭಾರಿ ಬೇಡಿಕೆ ಇದ್ದು, ಕೇರಳದ ಕಾರ್ಮಿಕರನ್ನು ಬಳಸಿಕೊಂಡು ನೀರು ಆಮದಿಗೆ ಯುಎಇ ಮುಂದಾಗಿದೆ ಎಂಬ ಸಂಗತಿ ಸುಳ್‌ಸುದ್ದಿ ನಡೆಸಿದ ತನಿಖೆಯಿಂದ ತಿಳಿದುಬಂದಿದೆ.

click me!