ಪಾಕ್‌ ಪತ್ರಕರ್ತೆ ಜೊತೆ ತರೂರ್‌ ಮದುವೆ ?

Published : Aug 13, 2018, 07:50 AM ISTUpdated : Sep 09, 2018, 09:43 PM IST
ಪಾಕ್‌ ಪತ್ರಕರ್ತೆ ಜೊತೆ ತರೂರ್‌ ಮದುವೆ ?

ಸಾರಾಂಶ

ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಮತ್ತೆ ವಿವಾಹವಾಗುತ್ತಿರುವ ಬಗ್ಗೆ ಇದೀಗ ಎಲ್ಲೆಡೆ ಸುದ್ದಿಯೊಂದು ಹರಡಿದ್ದು, ಆದರೆ ಇದು ಸುಳ್ಳು ಎಂದು ಕೊನೆಗೆ ತಿಳಿದು ಬಂದಿದೆ. 

ನವದೆಹಲಿ: ಕಾಂಗ್ರೆಸ್‌ ಸಂಸದ ಶಶಿತರೂರ್‌ ಮೂರನೇ ಮದುವೆಗೆ ಸಿದ್ಧರಾಗಿದ್ದಾರೆ. ಶೀಘ್ರವೇ ಅವರು ಪಾಕಿಸ್ತಾನ ಮೂಲದ ಪತ್ರಕರ್ತೆ ಮೆಹರ್  ತರಾರ್‌ ಅವರನ್ನು ವರಿಸಲಿದ್ದಾರೆ ಎಂದು ಹಬ್ಬಿಸಲಾದದ ಸುಳ್ಳು ಸುದ್ದಿಯೊಂದು ಭಾನುವಾರ ಭಾರೀ ಪ್ರಚಾರ ಗಿಟ್ಟಿಸಿಕೊಂಡಿತು. 

ಸಿಎನ್‌ಎನ್‌ನ್ಯೂಸ್‌ 18 ಹೆಸರಲ್ಲಿ ಇಂಥದ್ದೊಂದು ಸುದ್ದಿ ಹರಿದಾಡುತ್ತಲೇ ಭಾರೀ ಪ್ರಮಾಣದಲ್ಲಿ ಟ್ವೀಟಿಗರು ಇದಕ್ಕೆ ಪ್ರತಿಕ್ರಿಯೆ ನೀಡತೊಡಗಿದರು. 

ಈ ವೇಳೆ ಸ್ವತಃ ಮಧ್ಯಪ್ರವೇಶ ಮಾಡಿದ ತರಾರ್‌, ಇದೊಂದು ಸುಳ್ಳು ಸುದ್ದಿ. ಕೇವಲ 66 ಜನ ಹಿಂಬಾಲಕರನ್ನು ಹೊಂದಿರುವ ಖಾತೆಯಿಂದ ರವಾನೆಯಾದ ಇಂಥ ಸುದ್ದಿಯನ್ನೂ ಜನ ಪರಿಶೀಲಿಸದೆ ಹೇಗೆ ನಂಬತ್ತಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮ್ಮ ಹೊಸ ಮನೆಗೆ ಪೇಂಟ್ ಮಾಡುವಾಗ ಈ 7 ತಪ್ಪು ಮಾಡಬೇಡಿ!
ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!