ನೋಟು ನಿಷೇಧವಾದ 53 ದಿನದ ಒಳಗೆ 2000 ರು. ನಕಲಿ ನೋಟುಗಳ ಚಲಾವಣೆ

Published : Dec 08, 2017, 07:33 AM ISTUpdated : Apr 11, 2018, 12:45 PM IST
ನೋಟು ನಿಷೇಧವಾದ 53 ದಿನದ ಒಳಗೆ 2000 ರು. ನಕಲಿ ನೋಟುಗಳ ಚಲಾವಣೆ

ಸಾರಾಂಶ

ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟಲು 2016ರ ನವೆಂಬರ್ 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ತೀರ್ಮಾನವನ್ನು ಘೋಷಿಸಿದ್ದರು. ಇದಾಗಿ ಕೇವಲ 53 ದಿನಗಳ ಒಳಗೆ  ನೂತನ 500 ಹಾಗೂ 2000 ಮುಖಬೆಲೆಯ ನಕಲಿ ನೋಟುಗಳು ಹೊರ ಬಂದಿದ್ದವು.

ನವದೆಹಲಿ(ಡಿ.8): 500 ಮತ್ತು 1000 ಮುಖಬೆಲೆಯ ನೋಟುಗಳು ನಿಷೇಧಗೊಂಡ 53 ದಿನಗಳ ಒಳಗೆ  ಹೊಸದಾಗಿ ಬಂದಿದ್ದ 2000 ಮುಖಬೆಲೆಯ ನಕಲಿ ನೋಟುಗಳು ಚಲಾವಣೆಯಾಗಿದ್ದವು ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ ಮಾಹಿತಿಯನ್ನು ಬಹಿರಂಗ ಮಾಡಿದೆ.

ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟಲು 2016ರ ನವೆಂಬರ್ 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ತೀರ್ಮಾನವನ್ನು ಘೋಷಿಸಿದ್ದರು. ಇದಾಗಿ ಕೇವಲ 53 ದಿನಗಳ ಒಳಗೆ  ನೂತನ 500 ಹಾಗೂ 2000 ಮುಖಬೆಲೆಯ ನಕಲಿ ನೋಟುಗಳು ಹೊರ ಬಂದಿದ್ದವು. ಪೊಲೀಸರು ಮೊದಲಿಗೆ  ಸಾವಿರಾರು ನೋಟುಗಳನ್ನು ವಶಪಡಿಸಿಕೊಂಡಿದ್ದರು ಎಂದು ಎನ್’ಸಿಆರ್’ಬಿ ಹೇಳಿದೆ.

ಮತ್ತೊಂದು ಆಶ್ಚರ್ಯಕರ ವಿಚಾರವೆಂದರೆ ಗುಜರಾತ್’ನಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.  ಉಳಿದಂತೆ ಪಂಜಾಬ್, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ,  ಆಂಧ್ರ, ಹರಿಯಾಣದಲ್ಲಿ ಹಾಗೂ ಜಮ್ಮು ಕಾಶ್ಮೀರ, ಕೇರಳದಲ್ಲಿಯೂ ಕೂಡ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ
ಪಾಕಿಸ್ತಾನ ಸೇನೆಯಲ್ಲಿರುವ ಮಹಿಳಾ ಸೇನಾಧಿಕಾರಿಗಳ ಸಂಖ್ಯೆ ಎಷ್ಟು?