
ನವದೆಹಲಿ(ಆ.29): ರಾಷ್ಟ್ರ ರಾಜಧಾನಿ ನವದೆಹಲಿಗೆ ಇದೀಗ ಹೊಸ ತಲೆನೋವೊಂದು ಶುರುವಾಗಿದೆ. ನಗರದಲ್ಲಿ ಕೋತಿಗಳ ಕಾಟ ಜಾಸ್ತಿಯಾಗಿದ್ದು, ಜನಸಾಮಾನ್ಯರಷ್ಟೇ ಅಲ್ಲ ಮಹಾನಗರ ಪಾಲಿಕೆ ಕೂಡ ತಲೆ ಮೇಲೆ ಕೈಹೊತ್ತು ಕುಳಿತಿದೆ.
ಕೋತಿಗಳ ಕಾಟದಿಂದ ಮುಕ್ತಿ ಪಡೆಯಲು ಪಾಲಿಕೆ ಹೊಸ ಪ್ಲ್ಯಾನ್ ಮಾಡಿದ್ದು, ಅದರಂತೆ ತನ್ನ ಸಿಬ್ಬಂದಿಗೆ ಕೋತಿ ಹಿಡಿಯುವ ತರಬೇತಿ ಕೊಡಲು ಮುಂದಾಗಿದೆ.
ಪಾಲಿಕೆಯ 10 ಸಿಬ್ಬಂದಿಗೆ ವನ್ಯಮೃಗ ಸಂರಕ್ಷಣಾ ಘಟಕದಲ್ಲಿ ಕೋತಿಗಳನ್ನು ಹಿಡಿಯುವ ಬಗೆ ಕುರಿತು ತರಬೇತಿ ನೀಡಲಾಗುವುದು ಎಂದು ದೆಹಲಿ ಮಹಾನಗರ ಪಾಲಿಕೆ ತಿಳಿಸಿದೆ.
ಈ ಹಿಂದೆ ಕೋತಿಗಳನ್ನು ಹಿಡಿಯಲು ಖಾಸಗಿ ವ್ಯಕ್ತಿಗಳನ್ನು ನೇಮಿಸಿದ್ದ ಪಾಲಿಕೆ, ಒಂದು ಕೋತಿ ಹಿಡಿದು ಕೊಟ್ಟರೆ 2,400 ರೂ. ಕೊಡುತ್ತಿತ್ತು. ಆದರೆ ಇತ್ತೀಚೆಗೆ ಈ ಕಾರ್ಯಕ್ಕೆ ಜನ ಬರುತ್ತಿಲ್ಲವಾದ್ದರಿಂದ ತನ್ನ ಸಿಬ್ಬಂದಿಗೇ ಇದರ ತರಬೇತಿ ಕೊಡಿಸಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.