Fact Check: ಮೋದಿ ಸರ್ಕಾರದಿಂದ ಉಚಿತ ಸೋಲಾರ್ ಪ್ಯಾನೆಲ್?

By Web DeskFirst Published Aug 3, 2019, 9:41 AM IST
Highlights

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೋಲಾರ್‌ ಪ್ಯಾನೆಲ್‌ಗಳನ್ನು ಉಚಿತವಾಗಿ ನೀಡುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೋಲಾರ್‌ ಪ್ಯಾನೆಲ್‌ಗಳನ್ನು ಉಚಿತವಾಗಿ ನೀಡುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್‌ ಆಗಿರುವ ಹಿಂದಿ ಸಂದೇಶದಲ್ಲಿ ‘ಸೋಲಾರ್‌-ಪ್ಯಾನೆಲ್‌-ರಿಸೀವ್‌.ಬ್ಲಾಗ್‌ಸ್ಪಾಟ್‌.ಕಾಮ್‌’ ವೆಬ್‌ಸೈಟ್‌ ತೆರೆದು ಅರ್ಜಿ ಭರ್ತಿ ಮಾಡಿದರೆ ಕೇಂದ್ರ ಸರ್ಕಾರ ಸೋಲಾರ್‌ ಪ್ಯಾನೆಲನ್ನು ಮನೆಬಾಗಿಲಿಗೆ ಉಚಿತವಾಗಿ ತಂದು ಕೊಡಲಿದೆ. ಈ ಸಂದೇಶವನ್ನು ತುರ್ತಾಗಿ ನಿಮ್ಮ ಸ್ನೇಹಿತರಿಗೆ ಫಾರ್ವರ್ಡ್‌ ಮಾಡಿ’ ಎಂದು ಹೇಳಲಾಗಿದೆ.

ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಇದು ಹೆಚ್ಚು ವೈರಲ್‌ ಆಗುತ್ತಿದೆ. ಆದರೆ ಕೇಂದ್ರ ಸರ್ಕಾರ ಸೋಲಾರ್‌ ಪ್ಯಾನೆಲನ್ನು ಉಚಿತವಾಗಿ ನೀಡುತ್ತಿರುವುದು ನಿಜವೇ ಎಂದು ‘ಬೂಮ್‌ ಲೈವ್‌’ ಸುದ್ದಿ ಸಂಸ್ಥೆ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ವೈರಲ್‌ ಆಗಿರುವ ಸಂದೇಶದಲ್ಲಿಯೇ ಅದು ಸುಳ್ಳು ಎಂಬುದಕ್ಕೆ ಹಲವು ಕುರುಹುಗಳಿವೆ.

ಮೊದಲನೆಯದಾಗ ಸರ್ಕಾರಿ ವೆಬ್‌ಸೈಟ್‌ ‘ಜಟvಠಿ.ಜ್ಞಿಅಥವಾ ್ಞಜ್ಚಿ’ಎಂದು ಕೊನೆಯಾಗುತ್ತವೆ. ಬ್ಲಾಗ್‌ಸ್ಪಾಟ್‌ ಎಂದು ಕೊನೆಯಾಗುವುದಿಲ್ಲ. ಅಲ್ಲದೆ ವೆಬ್‌ಸೈಟ್‌ ತೆರೆದು ಅರ್ಜಿಯನ್ನು ಭರ್ತಿ ಮಾಡಿದ ಬಳಿಕ 10 ಜನರಿಗೆ ಈ ಸಂದೇಶ ಕಳುಹಿಸುವುದು ಕಡ್ಡಾಯವೆಂದು ಹೇಳಲಾಗುತ್ತದೆ.

ಅಲ್ಲಿಗೆ ಇದೊಂದು ನಕಲಿ ವೆಬ್‌ಸೈಟ್‌ ಎಂಬುದು ಸ್ಪಷ್ಟ. ಇಂತಹ ನಕಲಿ ವೆಬ್ಸ್‌ಸೈಟ್‌ಗಳನ್ನು ಸೃಷ್ಟಿಸಿ ಮಾಹಿತಿಯನ್ನು ಕದಿಯುವುದು ಮತ್ತು ಜಾಹೀರಾತುಗಳಿಂದ ಹಣ ಮಾಡುವುದು ಈ ರೀತಿಯ ಸಂದೇಶಗಳ ಉದ್ದೇಶ.

- ವೈರಲ್ ಚೆಕ್ 

click me!