Fact Check : ಪತಿಗೆ ಹಸಿವಾದಾಗ ಪತ್ನಿಯನ್ನೇ ತಿನ್ನಬಹುದು ಎಂದ್ರಾ ಸೌದಿ ಪಾದ್ರಿ?

Published : Jul 22, 2019, 09:57 AM IST
Fact Check : ಪತಿಗೆ ಹಸಿವಾದಾಗ ಪತ್ನಿಯನ್ನೇ ತಿನ್ನಬಹುದು ಎಂದ್ರಾ ಸೌದಿ ಪಾದ್ರಿ?

ಸಾರಾಂಶ

ಜಗತ್ತಿನ ಪ್ರಮುಖ ಮುಸ್ಲಿಂ ಪಾದ್ರಿ ಅಜೀಜ್‌ ಬಿನ್‌ ಅಬ್ದುಲ್ಲ, ಪತಿ ತೀರಾ ಹಸಿದಾಗ ಪತ್ನಿಯನ್ನು ತಿನ್ನಬಹುದು ಎಂದು ಫತ್ವಾ ಹೊರಡಿಸಿದ್ದಾರೆ ಎನ್ನಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಜಗತ್ತಿನ ಪ್ರಮುಖ ಮುಸ್ಲಿಂ ಪಾದ್ರಿ ಅಜೀಜ್‌ ಬಿನ್‌ ಅಬ್ದುಲ್ಲ, ಪತಿ ತೀರಾ ಹಸಿದಾಗ ಪತ್ನಿಯನ್ನು ತಿನ್ನಬಹುದು ಎಂದು ಫತ್ವಾ ಹೊರಡಿಸಿದ್ದಾರೆ ಎನ್ನಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕುಷಿ ಸಿಂಗ್‌ ಎಂಬುವವರು ಮೊದಲಿಗೆ ಇದನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅನಂತರ ರುಷಿ ವೆಕಾರಿಯಾ ಎಂಬುವವರೂ ಕೂಡ ಟ್ವಿಟ ಮಾಡಿದ್ದು, ಇದು 300 ಬಾರಿ ರೀಟ್ವೀಟ್‌ ಆಗಿದೆ. ಅನಂತರ ಇದು ಸೋಷಿಯಲ್‌ ಮೀಡಿಯಾದಲ್ಲಿ ಬೈರಲ್‌ ಆಗುತ್ತಿದೆ. ‘ವಿ ಸಪೋರ್ಟ್‌ ರಿಪಬ್ಲಿಕ್‌’ ಎನ್ನುವ ಫೇಸ್‌ಬುಕ್‌ ಪೇಜ್‌ಕೂ ಇದನ್ನು ಪೋಸ್ಟ್‌ ಮಾಡಿದೆ.

ಆದರೆ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಇದು 2015ರಲ್ಲಿ ಸುದ್ದಿ ಮಾಧ್ಯಮವೊಂದರಲ್ಲಿ ಪ್ರಕಟವಾಗಿದ್ದು ಎಂದು ತಿಳಿದುಬಂದಿದೆ. ಇಂಡಿಯಾ ಟುಡೇ ಸುದ್ದಿವಾಹಿನಿಯೂ ‘ಪತಿ ತೀರಾ ಹಸಿದಾಗ ಪತ್ನಿಯನ್ನು ಕೊಂದು ತಿನ್ನಬಹುದು: ಸೌದಿ ಶೇಕ್‌’ ಎಂಬ ಶೀರ್ಷಿಕೆಯಡಿ ಇದನ್ನು ವರದಿ ಮಾಡಿತ್ತು.

ಆದರೆ ಕೊನೆಯಲ್ಲಿ ಸೌದಿಯ ಶೇಕ್‌ ಈ ರೀತಿಯ ಫತ್ವಾ ಹೊರಡಿಸಿಲ್ಲ ಎಂದಿದ್ದಾರೆ ಎಂದಿದೆ. ಅಲ್ಲದೆ ಹಲವಾರು ಮಾಧ್ಯಮಗಳೂ ಇದೊಂದು ಸುಳ್ಳುಸುದ್ದಿ ಎಂದು 2017ರಲ್ಲೇ ವರದಿ ಮಾಡಿವೆ. ಹಾಗಾಗಿ ಸೌದಿ ಅರೇಬಿಯಾದ ಪ್ರಮುಖ ಪಾದ್ರಿ ತೀರಾ ಹಸಿವಾದಾಗ ಪತಿಯು ಪತ್ನಿಯನ್ನೇ ತಿನ್ನಬಹುದು ಎಂದು ಫತ್ವಾ ಹೊರಡಿಸಿಲ್ಲ ಎಂದಬುದು ಸ್ಪಷ್ಟ.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ
ಶಾಮನೂರು ಶಿವಶಂಕರಪ್ಪ ನಿಧನ: ಕಾಶಿ ಜಗದ್ಗುರು ಶ್ರೀಗಳ ಸಂತಾಪ,ವೀರಭದ್ರೇಶ್ವರ ಜಾತ್ರಾ ಮಹೋತ್ಸವ ರದ್ದು!