ಇತ್ತೀಚೆಗೆ ಡೆಂಗ್ಯು ಎಲ್ಲಡೆ ಹಬ್ಬುತ್ತಿದೆ. ಈ ನಡುವೆ ಡೆಂಗ್ಯು ಕಾಯಿಲೆಯನ್ನು 48 ಗಂಟೆಗಳಲ್ಲಿ ಗುಣಪಡಿಸುವ ಔಷಧವೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಈ ಸುದ್ದಿ ನೋಡಿ.
ಇತ್ತೀಚೆಗೆ ಡೆಂಗ್ಯು ಎಲ್ಲಡೆ ಹಬ್ಬುತ್ತಿದೆ. ಈ ನಡುವೆ ಡೆಂಗ್ಯು ಕಾಯಿಲೆಯನ್ನು 48 ಗಂಟೆಗಳಲ್ಲಿ ಗುಣಪಡಿಸುವ ಔಷಧವೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಪ್ಪಾಯ ಎಲೆಯ ಸಾರವನ್ನು ಒಳಗೊಂಡಿರುವ ‘ಕ್ಯಾರಿಪಿಲ್’ ಮಾತ್ರೆಯು ಡೆಂಗ್ಯುವನ್ನು ಕೆಲವೇ ಗಂಟೆಗಳಲ್ಲಿ ಗುಣಪಡಿಸುವ ಶಕ್ತಿ ಹೊಂದಿದೆ. ‘ಅಂತಃಕರಣ’ ಇದನ್ನು ಉಚಿತವಾಗಿ ನೀಡುತ್ತಿದೆ ಎಂದು ಕೆಲವು ಫೋನ್ ನಂಬರ್‌ಗಳನ್ನು ನಮೂದಿಸಲಾಗಿದೆ. ಫಾರ್ವರ್ಡ್ ಮಾಡದೆ ಈ ಸಂದೇಶವನ್ನು ಅಳಿಸಬೇಡಿ ಎಂದು ಕೋರಲಾಗಿದೆ.
ಈ ಸುದ್ದಿ ನಿಜವೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಲು ಸಂದೇಶದಲ್ಲಿ ನಮೂದಿಸಿರುವ ಫೋನ್ ನಂಬರ್‌ಗಳಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸದ ವ್ಯಕ್ತಿ ದಕ್ಷಿಣ ಭಾರತೀಯರ ಮಾತಿನ ಧಾಟಿಯಂತೆ ಮಾತನಾಡಿದ್ದಾರೆ. ಅಲ್ಲದೆ ‘ವೈರಲ್ ಆಗಿರುವ ವಾಟ್ಸ್‌ಆ್ಯಪ್ ಸಂದೇಶ ಸುಳ್ಳು.
ವೈರಲ್ ಚೆಕ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಅಂತಃಕರಣ ಎಂಬುದು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿರುವ ಹೋಮಿಯೋಪತಿ ಕ್ಲೀನಿಕ್. ಈ ಸಂದೇಶ ನೋಡಿ ಹಲವಾರು ಜನರಿ ಕರೆ ಮಾಡುತ್ತಿದ್ದಾರೆ. ನಮ್ಮ ಜಾಹೀರಾತಿಗೆ ಫೋಟೋಶಾಪ್ ಮೂಲಕ ಎಡಿಟ್ ಮಾಡಿ ಮಾತ್ರೆ ಪೋಟೋವನ್ನು ಸೇರಿಸಿ ಸುಳ್ಳು ಸುದ್ದಿ ಹರಡಲಾಗುತ್ತದೆ’ ಎಂದಿದ್ದಾರೆ.
ಕ್ಯಾಲಿಪಿಲ್ ಎನ್ನುವುದು ಸಸ್ಯವಿಜ್ಞಾನಕ್ಕೆ ಸಂಬಂಧಿಸಿದ ಮಾತ್ರೆಯಾಗಿದ್ದು ಬೆಂಗಳೂರಿನ ಮೈಕ್ರೋ ಲ್ಯಾಬ್ ಔಷಧ ತಯಾರಿಕಾ ಸಂಸ್ಥೆ ಇದನ್ನು ತಯಾರಿಸುತ್ತದೆ. ಹಾಗಾಗಿ ಈ ಕಂಪನಿ ಬಳಿ ಈ ಬಗ್ಗೆ ಸ್ಪಷ್ಟನೆ ಪಡೆದಾಗ, ‘ಈ ಮಾತ್ರೆಯು ಡೆಂಗ್ಯುವನ್ನು 48 ಗಂಟೆಗಳಲ್ಲಿ ಗುಣಪಡಿಸುತ್ತದೆ ಎಮದು ನಾವೆಲ್ಲೂ ಹೇಳಿಲ್ಲ. ಅಲ್ಲದೆ ವ್ಯಕ್ತಿಯ ಪ್ಲೇಟ್‌ಲೆಟ್‌ಗಳನ್ನು ಹೆಚ್ಚು ಮಾಡಲು ಈ ಮಾತ್ರೆ ಸಹಾಯಕವಗುತ್ತದಷ್ಟೆ’ ಎಂದಿದ್ದಾರೆ.
- ವೈರಲ್ ಚೆಕ್