ಡರ್ಟಿ ಡೈರಿ ಪ್ರಕರಣ: ವಿವಾದ ಸೃಷ್ಟಿಸಿದ ದಿನೇಶ್ ಅಮಿನ್ ಮಟ್ಟು ಫೇಸ್'ಬುಕ್ ಲೇಖನ

Published : Feb 26, 2017, 06:51 AM ISTUpdated : Apr 11, 2018, 12:50 PM IST
ಡರ್ಟಿ ಡೈರಿ ಪ್ರಕರಣ: ವಿವಾದ ಸೃಷ್ಟಿಸಿದ ದಿನೇಶ್ ಅಮಿನ್ ಮಟ್ಟು ಫೇಸ್'ಬುಕ್ ಲೇಖನ

ಸಾರಾಂಶ

ಕಾಂಗ್ರೆಸ್​​​​​​'ನಲ್ಲಿ ಡೈರಿ ಸ್ಫೋಟಗೊಂಡ ಬೆನ್ನಲ್ಲೇ ತೀವ್ರ ಸಂಚಲನ ಸೃಷ್ಟಿಸಿದೆ. ಜೊತೆಗೆ ಕಾಂಗ್ರೆಸ್​​​​​​'ನಲ್ಲೇ ಸಚಿವರ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಇವೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ಮಾಧ್ಯಮ ಸಲಹೆಗಾರ ದಿನೇಶ್​​ ಅಮಿನ್​​ ಮಟ್ಟು ಫೇಸ್​​ ಬುಕ್​​'ನಲ್ಲಿ ಲೇಖನ ಬರೆದು ಕಾಂಗ್ರೆಸ್'​​​ಗೆ ಮುಜುಗರ ಸೃಷ್ಟಿಸಿದ್ದಾರೆ.

ಬೆಂಗಳೂರು(ಫೆ.26): ಕಾಂಗ್ರೆಸ್​​​​​​'ನಲ್ಲಿ ಡೈರಿ ಸ್ಫೋಟಗೊಂಡ ಬೆನ್ನಲ್ಲೇ ತೀವ್ರ ಸಂಚಲನ ಸೃಷ್ಟಿಸಿದೆ. ಜೊತೆಗೆ ಕಾಂಗ್ರೆಸ್​​​​​​'ನಲ್ಲೇ ಸಚಿವರ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಇವೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ಮಾಧ್ಯಮ ಸಲಹೆಗಾರ ದಿನೇಶ್​​ ಅಮಿನ್​​ ಮಟ್ಟು ಫೇಸ್​​ ಬುಕ್​​'ನಲ್ಲಿ ಲೇಖನ ಬರೆದು ಕಾಂಗ್ರೆಸ್'​​​ಗೆ ಮುಜುಗರ ಸೃಷ್ಟಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈ ಸಿಕ್ರೇಟ್ ಡೈರಿಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ. ಜೈನ್ ಹವಾಲಾ ಡೈರಿ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯು.ವಿ.ಸಿಂಗ್ ನೀಡಿದ ತನಿಖಾ ವರದಿಯಲ್ಲಿನ ಖಾರದಪುಡಿ ಮಹೇಶ್ ಡೈರಿ, ಇತ್ತೀಚೆಗೆ ಸಹರಾ ಮತ್ತು ಬಿರ್ಲಾ ಕಂಪೆನಿಗಳ ಕಚೇರಿಯಲ್ಲಿ ಸಿಕ್ಕಿದೆಯೆನ್ನಲಾದ ಡೈರಿ, ಇದೀಗ ಎಂಎಲ್ ಸಿ ಗೋವಿಂದರಾಜ್ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆಯೆನ್ನಲಾದ ಡೈರಿ ಬಗ್ಗೆ ಚರ್ಚೆಯಾಗುತ್ತಿದೆ. ನೈತಿಕತೆಯ ಆಧಾರದ ಶಿಕ್ಷೆಗೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ  ಪಾಲಿಸಿದ ರಾಜಧರ್ಮದ ಮಾರ್ಗವೊಂದಿದೆ. ಇದು ಸರಿಯಾದ ಮಾರ್ಗ ಎಂದೆನಿಸುತ್ತದೆ. ಅಡ್ವಾಣಿಯವರು ಅದೇ ದಿನ ಸಂಜೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಗೋವಿಂದರಾಜ್ ಅವರದ್ದು ಎನ್ನಲಾದ ಡೈರಿಯಲ್ಲಿರುವ ಹೆಸರಿನ ಎಲ್ಲ ರಾಜಕಾರಣಿಗಳು ಕ್ಷಣಮಾತ್ರವೂ ಸಮಯ ವ್ಯರ್ಥಮಾಡದೆ ರಾಜೀನಾಮೆ ಎಸೆದುಬಿಡಬೇಕು ಎಂದು ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದಾರೆ.

ಆದರೆ, ಇದಕ್ಕೆ ಸಚಿವ ಆರ್​​.ವಿ.ದೇಶಪಾಂಡೆ ತಿರುಗೇಟು ಕೊಟ್ಟಿದ್ದಾರೆ. ದಿನೇಶ್ ಅಮೀನ್ ಮಟ್ಟು ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ, ಅವರು ಬಿಜೆಪಿ ಮಾಧ್ಯಮ ಸಲಹೆಗಾರರೋ ಅಥವಾ ಕಾಂಗ್ರೆಸ್ ಮುಖ್ಯಮಂತ್ರಿಗೆ ಮಾಧ್ಯಮ ಸಲಹೆಗಾರರೋ ಅಂತ ಟ್ವಿಟರ್'ನಲ್ಲಿ‌ ಸಚಿವ ಅರ್. ವಿ. ದೇಶಪಾಂಡೆ ಪ್ರಶ್ನೆ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!