ಫೇಸ್ಬುಕ್‌ ಜನರ ಮಾಹಿತಿ ಮಾರುತ್ತದೆ: ಸ್ಟೀವ್‌

By Suvarna Web DeskFirst Published Mar 24, 2018, 1:26 PM IST
Highlights

ಫೇಸ್‌'ಬುಕ್‌ ಕಂಪನಿಯು ಜನರ ವೈಯಕ್ತಿಕ ಮಾಹಿತಿಯನ್ನು ಉಚಿತವಾಗಿ ಪಡೆದುಕೊಂಡು ಭಾರಿ ಹಣಕ್ಕೆ ಮಾರುತ್ತದೆ ಎಂದು ಕೇಂಬ್ರಿಜ್‌ ಅನಾಲಿಟಿಕಾ ಕಂಪನಿಯ ಮಾಜಿ ಉಪಾಧ್ಯಕ್ಷ ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆ ಡೊನಾಲ್ಡ್‌ ಟ್ರಂಪ್‌ ಅವರ ಮುಖ್ಯ ಸಲಹೆಗಾರರಾಗಿದ್ದ ಸ್ಟೀವ್‌ ಬ್ಯಾನನ್‌ ಗಂಭೀರ ಆರೋಪ ಮಾಡಿದ್ದಾರೆ.

ವಾಷಿಂಗ್ಟನ್‌ (ಮಾ.24):  ಫೇಸ್‌'ಬುಕ್‌ ಕಂಪನಿಯು ಜನರ ವೈಯಕ್ತಿಕ ಮಾಹಿತಿಯನ್ನು ಉಚಿತವಾಗಿ ಪಡೆದುಕೊಂಡು ಭಾರಿ ಹಣಕ್ಕೆ ಮಾರುತ್ತದೆ ಎಂದು ಕೇಂಬ್ರಿಜ್‌ ಅನಾಲಿಟಿಕಾ ಕಂಪನಿಯ ಮಾಜಿ ಉಪಾಧ್ಯಕ್ಷ ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆ ಡೊನಾಲ್ಡ್‌ ಟ್ರಂಪ್‌ ಅವರ ಮುಖ್ಯ ಸಲಹೆಗಾರರಾಗಿದ್ದ ಸ್ಟೀವ್‌ ಬ್ಯಾನನ್‌ ಗಂಭೀರ ಆರೋಪ ಮಾಡಿದ್ದಾರೆ.

ಆ ಚುನಾವಣೆಯ ವೇಳೆ ಕೇಂಬ್ರಿಜ್‌ ಅನಾಲಿಟಿಕಾ ಕಂಪನಿಯು ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ದತ್ತಾಂಶಗಳನ್ನು ಕಳವು ಮಾಡಿದ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ಸ್ವತಃ ಫೇಸ್‌ಬುಕ್‌ ಕಂಪನಿ ಜನರ ಮಾಹಿತಿಯನ್ನು ಮಾರಾಟ ಮಾಡುತ್ತದೆ. ಅದರಿಂದ ಬೃಹತ್‌ ಪ್ರಮಾಣದ ಹಣ ಗಳಿಸುತ್ತದೆ. ಹಾಗಾಗಿಯೇ ಆ ಕಂಪನಿಯ ಮೌಲ್ಯ ಇಷ್ಟೊಂದು ಹೆಚ್ಚಿರುವುದು. ನಂತರ ಅಲ್ಲಿರುವವರು ಅಲ್ಗಾರಿದಮ್‌ಗಳನ್ನು ಬರೆದು ನಿಮ್ಮ ಬದುಕನ್ನು ನಿಯಂತ್ರಿಸುತ್ತಾರೆ ಎಂದು ಬ್ಯಾನನ್‌ ಹೇಳಿದ್ದಾರೆ.

click me!