
ಮುಂಬೈ: ಜನಪ್ರಿಯ ಸೋಶಿಯಲ್ ಮೀಡಿಯಾ ಫೇಸ್ಬುಕ್’ನ ಆ್ಯಪ್ ಇದೀಗ ಜಿಯೋ ಸ್ಮಾರ್ಟ್’ಫೋನ್’ನಲ್ಲೂ ಲಭ್ಯವಾಗಿದೆ.
ಫೇಸ್ಬುಕ್ ಆ್ಯಪ್’ನ ಈ ಹೊಸ ಆವೃತ್ತಿಯನ್ನು ವಿಶೇಷವಾಗಿ ಜಿಯೋ ಫೋನಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಫೇಸ್ಬುಕ್’ನ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ಜಿಯೋಕಿಯೋಸ್ ಎಂಬ ವೆಬ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಮೇಲೆ ಇದನ್ನು ಅಭಿವೃದ್ಧಿಪಡಿಸಲಾಗಿದೆಯೆಂದು ಪ್ರಕಟಣೆ ತಿಳಿಸಿದೆ.
ಈ ಮೂಲಕ ಜಿಯೋಫೋನ್ ಬಳಕೆದಾರರು ತಮ್ಮ ಪ್ರೀತಿಪಾತ್ರರೊಂದಿಗೆ ಫೇಸ್ಬುಕ್ ಮೂಲಕ ಸಂಪರ್ಕ ಸಾಧಿಸಲು ಇದು ಸಹಕಾರಿಯಾಗಿದೆ, ಈ ಆ್ಯಪ್ ಮೂಲಕ ಪುಶ್ ನೋಟಿಫಿಕೇಶನ್’ಗಳು, ವೀಡಿಯೋಗಳು ಮತ್ತು ಬಾಹ್ಯ ವಿಷಯಗಳಿರುವ ಲಿಂಕ್’ಗಳನ್ನು ಕೂಡಾ ತೆರೆಯಬಹುದಾಗಿದೆ. ಫೇಸ್ಬುಕ್’ನ ಜನಪ್ರಿಯ ಫೀಚರ್ಸ್’ಗಳಾದ ನ್ಯೂಸ್ ಫೀಡ್ ಮತ್ತು ಫೊಟೋಗಳಿಗೂ ಇದು ಸಪೋರ್ಟ್ ಮಾಡುತ್ತದೆ.
``ಜಿಯೋ ಫೋನ್ ವಿಶ್ವದ ಅತ್ಯಂತ ಕೈಗೆಟಕುವ ಸ್ಮಾರ್ಟ್’ಫೋನ್ ಆಗಿದ್ದು, ವಿಶೇಷವಾಗಿ ಭಾರತೀಯರಿಗಾಗಿ ಬೇಕಾದ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ಪ್ರತಿಯೊಬ್ಬ ಭಾರತೀಯ ಡಾಟಾ ಶಕ್ತಿಯೊಂದಿಗೆ ಸಶಕ್ತಗೊಳ್ಳಬೇಕೆಂದು ಇದನ್ನು ನಿರ್ಮಿಸಲಾಗಿದೆ, ಎಂದು ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
``ಜಿಯೋದೊಂದಿಗಿನ ನಮ್ಮ ಸಹಭಾಗಿತ್ವದ ಬಗ್ಗೆ ತುಂಬಾ ಖುಷಿಯಾಗುತ್ತಿದೆ ಮತ್ತು ಈಗ ಒದಗಿಸಲಾಗುತ್ತಿರುವ ಅವಕಾಶವು ಜಿಯೋಫೋನ್ ಬಳಸುತ್ತಿರುವ ಲಕ್ಷಾಂತರ ಮಂದಿಗೆ ಫೇಸ್ಬುಕ್’ನ ಅತ್ಯುತ್ತಮ ಅನುಭವ ಹೊಂದಬಹುದಾಗಿದೆ'' ಎಂದು ಫೇಸ್ಬುಕ್ ಮೊಬೈಲ್ ಸಹಭಾಗಿತ್ವದ ಉಪಾಧ್ಯಕ್ಷ ಫ್ರಾನ್ಸಿಸ್ಕೋ ವರೇಲಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.