
ರಾಜಸ್ಥಾನದ ಪೋಕ್ರಾನ್ ನಲ್ಲಿ ಮೃತಪಟ್ಟ ರಾಜ್ಯದ ಹರಿಹರದ ಯೋಧ ಜಾವೀದ್ ( 32 )ನ ಪಾರ್ಥೀವ ಶರೀರ ಮುಂಬೈನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಫೆ.12 ರಂದು ರಾಜಸ್ಥಾನದ ಪೋಕ್ರಾನ್ ನಲ್ಲಿ ಆರ್ಮಿ ಮದ್ರಾಸ್ ಇಂಜನಿಯರಿಂಗ್ ಗ್ರೂಪ್'ಗೆ ತರಬೇತಿ ನೀಡುತ್ತಿದ್ದ ವೇಳೆ ನಡೆದ ಬಾಂಬ್ ಸ್ಫೋಟದಲ್ಲಿ ಇವರು ಹುತಾತ್ಮರಾಗಿದ್ದರು. ದಾವಣಗೆರೆ ಜಿಲ್ಲೆ ಹರಿಹರದ ನಗರದ ಜಾವೀದ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಐಎಎಲ್ ನ ಕಾರ್ಗೋ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಯೋಧರಿಂದ ಗೌರವ ವಂದನೆ ನಂತರ ಸೇನಾ ವಾಹನದಲ್ಲಿ ದಾವಣಗೆರೆಯ ಹರಿಹರಕ್ಕೆ ರವಾನೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.