
ಇಸ್ಲಾಮಾಬಾದ್(ಅ.25): ಅಂತೂ ಪಾಕಿಸ್ತಾನ ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಪ್ರಧಾನಿ ನವಾಜ್ ಷರೀಪ್ , ಜೈಷ್-ಎ-ಮೊಹಮ್ಮದ್ ಸಂಘಟನೆ ಸೇರಿದಂತೆ ಶಂಕಿತ 5100 ಉಗ್ರರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ದಲ್ಲಿ 1200 ಶಂಕಿತ ಉಗ್ರರ ಖಾತೆಗಳು ಪತ್ತೆಯಾಗಿದ್ದು, ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದನೆ ನಿಗ್ರಹ ದಳ ಕಾಯ್ದೆ 1997ರ ಕಾಯ್ದೆ ಅನ್ವಯ 5100 ಉಗ್ರರ ಹಣಕಾಸಿನ ವಹಿವಾಟಿಗೆ ಕಡಿವಾಣ ಹಾಕಲಾಗಿದೆ. ಮೌಲಾನಾ ಮಸೂದ್ ಅಜರ್‌ನನ್ನು ಉಗ್ರರ ಎ ಗುಂಪಿನಲ್ಲಿ ಸೇರಿಸಲಾಗಿದೆ. ಪಠಾನ್‌ಕೋಟ್ ಉಗ್ರರ ದಾಳಿಯಲ್ಲಿ ಮಸೂದ್ ಅಜರ್ ಕೈವಾಡವಿದೆ ಎಂದು ಭಾರತ ಸರಕಾರ ಆರೋಪಿಸಿದ ಹಿನ್ನೆಲೆಯಲ್ಲಿ ಮಸೂದ್ ಅಜರ್‌ನನ್ನು ಗೃಹಬಂಧನದಲ್ಲಿರಿಸಲಾಗಿದ್ದು ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.
Click Here :ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.