ಆನ್'ಲೈನ್ ರೈಲು ಟಿಕೆಟ್ ಕಾದಿರಿಸುವವರಿಗೆ ಸಿಹಿ ಸುದ್ದಿ

By Suvarna Web DeskFirst Published Apr 1, 2017, 2:34 PM IST
Highlights

ನೋಟು ಅಮಾನ್ಯ ಕ್ರಮದ ಬಳಿಕ ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು ಸೇವಾ ಶುಲ್ಕವನ್ನು ತಾತ್ಕಾಲಿಕವಾಗಿ ರದ್ದುಪಡಿಸಿತ್ತು. ಮಾ.31, 2017 ರ ಬಳಿಕ ದಿನಂತೆ ಸೇವಾ ಶುಲ್ಕ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು.

ನವದೆಹಲಿ (ಎ.01):  ಆನ್’ಲೈನ್ ಮೂಲಕ ಟಿಕೆಟ್ ಕಾದಿರಿಸುವವರಿಗೆ ರೈಲ್ವೇ ಇಲಾಖೆಯಿಂದ ಸಿಹಿಸುದ್ದಿಯಿದೆ. ಆನ್’ಲೈನ್ ಟಿಕೆಟ್ ಕಾದಿರಿಸುವವರಿಗೆ ಸೇವಾ ಶುಲ್ಕದಲ್ಲಿ ನೀಡಲಾಗಿದ್ದ ರಿಯಾಯಿತಿಯನ್ನು ಜೂ.30ರ ವರೆಗೆ ವಿಸ್ತರಿಸಲಾಗಿದೆ.

ಆನ್’ಲೈನ್ ಟಿಕೆಟ್ ಕಾಯ್ದಿರಿಸುವವರಿಗೆ ವಿಧಿಸಲಾಗುತ್ತಿದ್ದ ಸೇವಾ ಶುಲ್ಕವನ್ನು ಕಳೆದ ನ.23ರಿಂದ ರದ್ದುಗೊಳಿಸಲಾಗಿತ್ತು. ನೋಟು ಅಮಾನ್ಯ ಕ್ರಮದ ಬಳಿಕ ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು ಸೇವಾ ಶುಲ್ಕವನ್ನು ತಾತ್ಕಾಲಿಕವಾಗಿ ರದ್ದುಪಡಿಸಿತ್ತು. ಮಾ.31, 2017 ರ ಬಳಿಕ ದಿನಂತೆ ಸೇವಾ ಶುಲ್ಕ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ರೈಲ್ವೇ ಇಲಾಖೆ ಅಧಿಕಾರಿಗಳ ಪ್ರಕಾರ  ಸೌಲಭ್ಯವನ್ನು ಜೂ.30ವರೆಗೆ ವಿಸ್ತರಿಸಲಾಗಿದೆ.

ಆನ್’ಲೈನ್ ಟಿಕೆಟ್ ಕಾಯ್ದಿರಿಸುವವರಿಗೆ ರೂ.20 ರಿಂದ ರೂ.40ರವರೆಗೆ ಸೇವಾಶುಲ್ಕವನ್ನು ವಿಧಿಸಲಾಗುತ್ತದೆ.

click me!