ನಿವೃತ್ತ ಡಿಐಜಿ ರಮೇಶ್‌ ಬಿಜೆಪಿ ಸೇರ್ಪ​ಡೆ

By internet DeskFirst Published Sep 28, 2016, 2:38 PM IST
Highlights

ಹೊಸದುರ್ಗ: ಬಿಜೆಪಿ ರಾಷ್ಟ್ರೀಯ ತತ್ವ ಸಿದ್ಧಾಂತಗಳನ್ನು ಒಪ್ಪಿ ಬಿ.ಜೆ.ಪಿ.ಯನ್ನು ಸೇರಿರುವುದಾಗಿ ನಿವೃತ್ತ ಡಿಐಜಿ ಜಿ.ರಮೇಶ್‌ ಹೇಳಿದರು.

ಪಟ್ಟಣದ ಬಿ.ಜೆ.ಪಿ. ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಅವ​ರು, 30 ವರ್ಷ ಸರ್ಕಾರಿ ಸೇವೆಯಲ್ಲಿದ್ದು, ಸಾರ್ವಜನಿಕರ ಸೇವೆ ಸಲ್ಲಿಸ​ಲಾ​ಗಿದೆ. ನಿವೃತ್ತಿ ನಂತರವೂ ಸಾರ್ವಜನಿಕರ ಸೇವೆ ಮಾಡುವ ಸದುದ್ದೇಶದಿಂದ ರಾಜಕೀಯಕ್ಕೆ ಬಂದಿದ್ದು, ಪಕ್ಷ ನೀಡುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವ​ಹಿ​ಸುವುದಾ​ಗಿ ತಿಳಿಸಿದರು.

Latest Videos

ದೇವಾಂಗ ಸಮಾಜದ ರಾಜ್ಯಾಧ್ಯಕ್ಷರಾದ ಮೇಲೆ ರಾಜ್ಯದ ಉದ್ದಗಲಕ್ಕೂ ಸುತ್ತುವ ಮೂಲಕ ಜನರ ಸಮಸ್ಯೆಗಳ ಬಗ್ಗೆ ಅರಿವು ಪಡೆ​ಯ​ಲಾ​ಗಿದೆ. ಪಕ್ಷದ ಸಿದ್ಧಾಂತ ಚೌಕಟ್ಟಿನಲ್ಲಿ ಬಡವರು, ದೀನ ದಲಿತರ ಉದ್ಧಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸಲಾಗು​ವುದು. ಮುಂದಿನ ಚುನಾವಣೆಯಲ್ಲಿ ಹೊಸದುರ್ಗ ತಾಲೂಕಿನಲ್ಲಿ ಬಿಜೆಪಿ ಸರ್ಕಾರದ ಶಾಸಕರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇ​ಕಿದೆ. ತಾಲೂಕಿನ ಮುಖಂಡರಲ್ಲಿನ ಸಣ್ಣ ಪುಟ್ಟಭಿನ್ನಾಭಿಪ್ರಾಯವನ್ನು ಬಗೆಹರಿಸುವ ಮೂಲಕ ಎಲ್ಲ ಹಂತದ ಮುಖಂಡರ ಸಲಹೆ, ಸಹಕಾರ ಪಡೆದು ಪಕ್ಷ ಸಂಘಟನೆಗೆ ಶ್ರಮಿಸಲಾಗು​ವುದು ಎಂದ​ರು.

click me!