ಮಧ್ಯವರ್ತಿಗಳಿಲ್ಲದೇ ಪ್ರತಿಯೊಂದು ಪೈಸೆಯೂ ಬಡವರಿಗೆ

Published : Aug 24, 2018, 07:39 AM ISTUpdated : Sep 09, 2018, 10:17 PM IST
ಮಧ್ಯವರ್ತಿಗಳಿಲ್ಲದೇ ಪ್ರತಿಯೊಂದು ಪೈಸೆಯೂ ಬಡವರಿಗೆ

ಸಾರಾಂಶ

ಮಧ್ಯವರ್ತಿಗಳಿಲ್ಲದೇ ಪ್ರತೀ ಪೈಸೆಯೂ ಕೂಡ ದೇಶದ ಬಡವರಿಗೆ ತಲುಪುತ್ತದೆ. ನಮ್ಮ ಸರ್ಕಾರದಲ್ಲಿ ಯಾವುದೇ ಮಧ್ಯವರ್ತಿಗಳಿಗೂ ಅವಕಾಶವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಅಹಮದಾಬಾದ್‌: ತಮ್ಮ ಸರ್ಕಾರದಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಜಾಗವಿಲ್ಲದಿರುವುದರಿಂದ, ಸರ್ಕಾರ ಬಿಡುಗಡೆಗೊಳಿಸುವ ಪ್ರತಿಯೊಂದು ರು. ಪ್ರತಿಯೊಂದು ಪೈಸೆಯೂ ಬಡವರಿಗೆ ತಲುಪುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್‌ನ ಜುಜ್ವಾದಲ್ಲಿ ನಡೆದ ಪ್ರಧಾನ ಮಂತ್ರಿ ವಸತಿ ಯೋಜನೆ-ಗ್ರಾಮೀಣದ ಫಲಾನುಭವಿಗಳ ‘ಇ-ಗೃಹಪ್ರವೇಶ’ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರದ ಮಹತ್ವಾಕಾಂಕ್ಷಿ ವಸತಿ ಯೋಜನೆಯ ಪ್ರಯೋಜನ ಪಡೆಯಲು ಈಗ ಜನರು ಲಂಚ ನೀಡಬೇಕಾಗಿಲ್ಲ. 2022ರೊಳಗೆ ಪ್ರತಿಯೊಂದು ಕುಟುಂಬಕ್ಕೂ ತಮ್ಮದೇ ಮನೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದೇನೆ ಎಂದೂ ಅವರು ತಿಳಿಸಿದರು.

ಸ್ವಚ್ಛ ಭಾರತ ನೇರವಾಗಿ ಆರೋಗ್ಯಕ್ಕೆ ಸಂಬಂಧಿಸಿದುದಾಗಿದೆ. ನಾನು ಸ್ವಚ್ಛತೆಯ ಬಗ್ಗೆ ಮಾತನಾಡುವಾಗ ನನ್ನನ್ನು ತಮಾಷೆ ಮಾಡಲಾಗುತ್ತಿದೆ. ಇದೇ ಕೆಲಸವನ್ನು 70 ವರ್ಷಗಳ ಹಿಂದೆ ಮಾಡಿದ್ದಿದ್ದರೆ, ದೇಶ ಈಗ ರೋಗ-ಮುಕ್ತವಾಗುತಿತ್ತು ಎಂದು ಮೋದಿ ಹೇಳಿದರು.

ಇಂದಿರಾ ಆವಾಜ್‌ ಯೋಜನೆಯನ್ನು 2016ರಲ್ಲಿ ಪ್ರಧಾನ ಮಂತ್ರಿ ಆವಾಜ್‌ ಯೋಜನಾ-ಗ್ರಾಮೀಣ ಎಂದು ಮರುನಾಮಕರಣಗೊಳಿಸಿ ಜಾರಿಗೊಳಿಸಲಾಗಿದೆ. ‘2022ರೊಳಗೆ ಎಲ್ಲರಿಗೂ ವಸತಿ’ ಯೋಜನೆಯಡಿ 2019ರೊಳಗೆ 1 ಕೋಟಿ ಮನೆ ಮತ್ತು 2022ರೊಳಗೆ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ: ಶ್ರೀ ಶ್ರೀ ರವಿಶಂಕರ್ ಗುರೂಜಿ
ಭಾರತ ವಿರೋಧಿ ತೀವ್ರಗಾಮಿ ನಾಯಕನ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ