
ಅಡ್ಡಿಸ್ ಅಬಬ[ಜೂ.24]: ಹಲವು ಸಮಯದಿಂದ ಆಂತರಿಕ ಸಂಘರ್ಷಕ್ಕೆ ಸಿಕ್ಕಿ ನಲುಗಿರುವ ಆಫ್ರಿಕಾದ ಇಥಿಯೋಪಿಯೋದಲ್ಲಿ, ಇದೀಗ ಸೇನಾ ಮುಖ್ಯಸ್ಥರನ್ನೇ ಹತ್ಯೆಗೈಯಲಾಗಿದೆ. ಸೇನಾ ಮುಖ್ಯಸ್ಥ ಸಿಯರೆ ಮೆಕೊನೆನ್ ಅವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಇಥಿಯೋಪಿಯಾದ 9 ಸ್ವಾಯತ್ತ ರಾಜ್ಯಗಳ ಪೈಕಿ ಒಂದಾದ ಅಮಹರಾವನ್ನು ತೆಕ್ಕೆಗೆ ತೆಗೆದುಕೊಳ್ಳಲು ಮೆಕೊನೆನ್ ಅವರು ದಂಗೆ ನಡೆಸಲು ಸಂಚು ರೂಪಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಈ ದಾಳಿಗೂ ಕೆಲವೇ ಗಂಟೆಗಳ ಮೊದಲು ಅಮಹರಾದ ಅಧ್ಯಕ್ಷ ಅಂಬಚ್ಯೂ ಅವರನ್ನೂ ಗುಂಪೊಂದು ಗುಂಡಿಟ್ಟು ಹತ್ಯೆ ಮಾಡಿದೆ. ಇಥಿಯೋಪಿಯಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅಭಿಯ್ ಅಹಮದ್ ಭಾರೀ ಪ್ರಮಾಣದಲ್ಲಿ ಸುಧಾರಣಾ ಕ್ರಮಗಳನ್ನು ಘೋಷಿಸಿದ್ದಾರೆ.
ಸೇನೆ ಮತ್ತು ಗುಪ್ತಚರ ವಿಭಾಗದಲ್ಲಿ ಭಾರೀ ಬದಲಾವಣೆ ತಂದಿದ್ದಾರೆ. ಇದಕ್ಕೆ ಭಾರೀ ವಿರೋಧ ಹೊಂದಿರುವ ಸೇನೆಯಲ್ಲಿನ ಕೆಲ ಹಿರಿಯರು ದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.