ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿದ್ದರು ಈಶ್ವರಪ್ಪ

By Suvarna Web DeskFirst Published Mar 26, 2018, 10:56 AM IST
Highlights

ಕಾಂಗ್ರೆಸ್ಸಿನ ಸಂಸದರಾಗಿದ್ದ ಎಂ.ವಿ. ಚಂದ್ರಶೇಖರ ಮೂರ್ತಿ ಅವರ ಅಕಾಲಿಕ ನಿಧನದಿಂದಾಗಿ ಕನಕಪುರ ಲೋಕಸಭಾ ಕ್ಷೇತ್ರ (ಈಗ ಅಸ್ತಿತ್ವದಲ್ಲಿ ಇಲ್ಲ)ಕ್ಕೆ 2002ರಲ್ಲಿ ಉಪಚುನಾವಣೆ ನಡೆಯಿತು.

ಬೆಂಗಳೂರು : ಕಾಂಗ್ರೆಸ್ಸಿನ ಸಂಸದರಾಗಿದ್ದ ಎಂ.ವಿ. ಚಂದ್ರಶೇಖರ ಮೂರ್ತಿ ಅವರ ಅಕಾಲಿಕ ನಿಧನದಿಂದಾಗಿ ಕನಕಪುರ ಲೋಕಸಭಾ ಕ್ಷೇತ್ರ (ಈಗ ಅಸ್ತಿತ್ವದಲ್ಲಿ ಇಲ್ಲ)ಕ್ಕೆ 2002ರಲ್ಲಿ ಉಪಚುನಾವಣೆ ನಡೆಯಿತು.

ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಡಿ. ದೇವೇಗೌಡ ಸ್ಪರ್ಧೆ ಮಾಡಿದ್ದರು. ಅವರ ಎದುರಾಳಿಯಾಗಿ ಕಾಂಗ್ರೆಸ್ಸಿನಿಂದ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿಯಿಂದ ಕೆ.ಎಸ್. ಈಶ್ವರಪ್ಪ  ಅಖಾಡಕ್ಕೆ ಇಳಿದಿದ್ದರು.

 ಭಾರಿ ಕುತೂಹಲ ಕೆರಳಿಸಿದ್ದ ಜಿದ್ದಾಜಿದ್ದಿ ಕದನ ಇದಾಗಿತ್ತು. ಫಲಿತಾಂಶ ಬಂದಾಗ ದೇವೇಗೌಡರು ಡಿಕೆಶಿ ಅವರನ್ನು 52 ಸಾವಿರ ಮತಗಳ ಅಂತರದಿಂದ ಮಣಿಸಿದ್ದರು. ಈಶ್ವರಪ್ಪ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

click me!