
ಬೆಂಗಳೂರು (ಡಿ. 27): ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಕದನ ಮತ್ತೆ ಶುರುವಾಗಿದೆ. ಬಿಜೆಪಿ ಬರ ಅಧ್ಯಯನ ಸಮಿತಿಯಲ್ಲಿ ಮಾಜಿ ಡಿಸಿಎಂ ಈಶ್ವರಪ್ಪರನ್ನು ಕೈಬಿಡಲಾಗಿದೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಸಂಘಟನೆಯಲ್ಲಿ ಈಶ್ವರಪ್ಪ ಭಾಗಿ ಹಿನ್ನೆಲೆಯಲ್ಲಿ ಬರ ಅಧ್ಯಯನ ಪ್ರವಾಸದ 3 ತಂಡಗಳ ಪೈಕಿ ಈಶ್ವರಪ್ಪಗೆ ಸ್ಥಾನ ನೀಡಲಾಗಿಲ್ಲವೆಂದು ಬಿಜೆಪಿ ಹೇಳಿದೆ. ಬರ ಅಧ್ಯಯನ ಬಗ್ಗೆ ನನಗೆ ಗೊತ್ತೆ ಇಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ. ಬಿ.ಎಸ್ ವೈ ಕಂಸ ಇದ್ದಂತೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿದರು. ಈಶ್ವರಪ್ಪನ ಕುತ್ತಿಗೆ ಕೊಯ್ದರೂ ಬಿಜೆಪಿ ಬಿಡಲ್ಲ . ಕೃಷ್ಣ ಹೊಟ್ಟೆಯಲ್ಲಿ ಇರುವಾಗಲೇ ಕಂಸನಿಗೆ ಭಯ ಹುಟ್ಟಿತ್ತು. ಬ್ರಿಗೇಡ್ ನಿಂದ ಕೆಲವರಿಗೆ ಭಯ ಹುಟ್ಟಿದೆ. ಬ್ರೀಗೇಡ್ ಹುಟ್ಟಿದಾಗಿನಿಂದ ಯಡಿಯೂರಪ್ಪ ಹೊರತುಪಡಿಸಿ ಮತ್ತಾರೂ ಬ್ರಿಗೇಡ್ ವಿರೋಧಿಸಿಲ್ಲ. ಯಡಿಯೂರಪ್ಪ ಕಂಸ ಇದ್ದಂತೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.
ರಾಯಣ್ಣ ಬ್ರಿಗೇಡ್'ಗೂ ಬಿಜೆಪಿಗೂ ಮತ್ತು ಯಾವ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಯಡಿಯೂರಪ್ಪ ಅವರಿಗೆ ನನಗೆ ನಮ್ಮ ಹಿರಿಯರು ಕುಳಿತು ಮಾತನಾಡಿಸಿದ್ದಾರೆ. ಮೊದಲು ಬಿಎಸ್ ವೈಯನ್ನು ಸಿಎಂ ಮಾಡಲು ಬ್ರಿಗೇಡ್ ಶ್ರಮಿಸಲಿದೆ ಎಂದು ಹಿಂದೆ ಹೇಳಿದ್ದೆ. ಆದ್ರೆ ಬಿಎಸ್ ವೈ ಅವರು ನಾನು ಸಿಎಂ ಆಗಲು ಬ್ರಿಗೇಡ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬ್ರಿಗೇಡ್ ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸಲಿದೆ. ಜ. 26 ಸಂಗೋಳ್ಳಿ ರಾಯಣ್ಣನ ಗಲ್ಲಿಗೇರಿಸಿದ ದಿನ ಅಂದು ಕೂಡಲ ಸಂಗಮದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. ಅಂದು ನಮ್ಮ ಶಕ್ತಿ ಪ್ರದರ್ಶನ ಗೊತ್ತಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.