
ಚೆನ್ನೈ(ಏ.21): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬರುತ್ತಿರುವಾಗಲೇ, ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಕಳೆದ ಕೊನೆಯ ದಿನಗಳ ವಿಡಿಯೋ ಬಿಡುಗಡೆ ಮಾಡಬೇಕಾಗುತ್ತದೆ ಶಶಿಕಲಾ ನಟರಾಜನ್ ಬಂಧು ಜಯನಂದ ದಿವಾಕರನ್ ಎಂಬುವರು ಬೆದರಿಕೆಯೊಡ್ಡಿದ್ದಾರೆ.
ಜಯಲಲಿತಾ ಹಾಗೂ ಶಶಿಕಲಾ ನಡುವೆ ಯಾವ ರೀತಿಯ ಸಂಬಂಧವಿತ್ತು ಎಂಬುದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಜಯಾ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸುತ್ತಿರುವ ಶಶಿಕಲಾ ಅವರ ಎದುರಾಳಿ, ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಬಣಕ್ಕೆ ತಿರುಗೇಟು ನೀಡುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ದಿವಾಕರನ್ ಅವರು ಈ ಹೇಳಿಕೆಗಳನ್ನು ಬರೆದಿದ್ದರಾದರೂ, ಬಳಿಕ ಅಳಿಸಿ ಹಾಕಿದ್ದಾರೆ.
ಕೊಲೆಗಡುಕಿ ಎಂಬ ಟೀಕೆ ಕೇಳಿಬಂದರೂ ಜಯಲಲಿತಾ ಅವರ ಫೋಟೋವನ್ನು ಶಶಿಕಲಾ ಬಹಿರಂಗಪಡಿಸಲಿಲ್ಲ. ಜಯಾ ಅವರು ನಿಧನರಾಗುವವರೆಗೂ ಅವರನ್ನು ಶಕ್ತಿಶಾಲಿ ಸಿಂಹದಂತೆ ನೋಡಿಕೊಂಡು, ವಿದಾಯ ಹೇಳಿದೆವು. ಆದರೆ ಪನ್ನೀರ್‌ಸೆಲ್ವಂ ಅವರು ಮತ ಗಳಿಸುವ ಉದ್ದೇಶದಿಂದ ಜಯಾ ಅವರ ಶವವನ್ನು ಪೆಟ್ಟಿಗೆಯಲ್ಲಿಟ್ಟು ಮೆರವಣಿಗೆ ಮಾಡಿದರು ಎಂದು ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.