ಪಿಎಫ್ ವಿತ್ ಡ್ರಾಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ

By Suvarna Web DeskFirst Published Feb 28, 2017, 1:10 PM IST
Highlights

ಆಧಾರ್ ಕಾರ್ಡ್ ಇಲ್ಲದೇ ಪಿಂಚಣಿ ಖಾತೆಯಿಂದ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಲು ನಿವೃತ್ತಿ ನಿಧಿ ಆಯೋಗವು (ಇಪಿಎಫ್ಓ) ಅವಕಾಶ ನೀಡಿದೆ.  

ನವದೆಹಲಿ (ಫೆ.28): ಆಧಾರ್ ಕಾರ್ಡ್ ಇಲ್ಲದೇ ಪಿಂಚಣಿ ಖಾತೆಯಿಂದ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಲು ನಿವೃತ್ತಿ ನಿಧಿ ಆಯೋಗವು (ಇಪಿಎಫ್ಓ) ಅವಕಾಶ ನೀಡಿದೆ.  

ಪಿಂಚಣಿ ಖಾತೆಯಿಂದ ಹಣವನ್ನು ವಿತ್ ಡ್ರಾ ಮಾಡಲು ಅರ್ಜಿ ಸಲ್ಲಿಸಿದವರು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕು ಎಂದು ಆದೇಶಿಸಲಾಗಿಲಾಗಿತ್ತು. ಆದರೆ ಆಧಾರ್ ಕಾರ್ಡ್ ನೀಡುವ ಅಗತ್ಯವಿಲ್ಲ ಎಂದು ಇಪಿಎಫ್ಓ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

10 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರೂ ಕೂಡಾ ಫಾರ್ಮ್ 10 ಸಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ನಮೂನೆ10 ಡಿ ಅಡಿಯಲ್ಲಿ ಪಿಂಚಣಿಗೆ ಅರ್ಜಿ ಸಲ್ಲಿಸುವವರಿಗೆ ಆಧಾರ್ ಕಾರ್ಡ್ ನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಫಾರ್ಮ್ 10 ಸಿ ಅಡಿಯಲ್ಲಿ ವಿತ್ ಡ್ರಾಗೆ ಅರ್ಜಿ ಸಲ್ಲಿಸುವವರಿಗೆ  ಆಧಾರ್ ಕಡ್ಡಾಯಗೊಳಿಸುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಸದ್ಯಕ್ಕೆ ಪಿಂಚಣಿಗಾಗಿ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಲಾಗಿದೆ ಆದರೆ ವಿತ್ ಡ್ರಾಗಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   

click me!