
ಬೆಂಗಳೂರು(ಜ.12): ಹೊಸ ವರ್ಷಾಚರಣೆ ವೇಳೆ ಎಂಜಿರೋಡ್ ಮತ್ತು ಬ್ರಿಗೇಡ್ ರೋಡಿನಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ.. ಕಮ್ಮನಹಳ್ಳಿಯಲ್ಲಿ ನಡುರಸ್ತೆಯಲ್ಲೇ ಯುವತಿಯನ್ನ ತಬ್ಬಿಸಿ ಎಳೆದಾಡಿದರು. ವೈಯಾಲಿ ಕಾವಲ್ ಸ್ಟೇಷನ್ ಲಿಮಿಟ್ನಲ್ಲಿ ಹುಡುಗಿಯರ ಮೈ ಮುಟ್ಟಲು ಉತ್ನಿಸಿದ ಕೀಚಕ. ಈ ಎಲ್ಲ ಪ್ರಕರಣಗಳಿಂದ ಬೆಂಗಳೂರು ಮಾನ-ಮರ್ಯಾದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗಿತ್ತು. ಇದೀಗ, ಮತ್ತೊಮ್ಮೆ ಸಿಲಿಕಾನ್ ಸಿಟಿಗೆ ಕಪ್ಪುಚುಕ್ಕೆ ಬಂದಿದೆ. ಅದು ಫ್ರೆಂಚ್ ಡಿಸ್ಕೋ ಜಾಕಿ ವಿಚಾರದಲ್ಲಿ. ಬೆಂಗಳೂರಿನ ಸರಣಿ ಲೈಂಗಿಕ ಕಿರುಕುಳ ಪರಿಣಾಮ ದೊಡ್ಡ ಪೆಟ್ಟು ಬಿದ್ದಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಫ್ರೆಂಚ್ ಡಿಜೆ ಡೆವಿಡ್ ಗೆಟ್ಟಾ, ಯಲಹಂಕ ಸಮೀಪದ ರಾಜಾನುಕುಂಟೆಯಲ್ಲಿ ನಡೆಸಿಕೊಡಬೇಕಿದ್ದ ಬೆಂಗಳೂರು ಕನ್ಸರ್ಟ್ ಅನ್ನು ಕ್ಯಾನ್ಸಲ್ ಮಾಡಿದ್ಧಾರೆ. ಅದಕ್ಕೆ ಆತ ಕೊಟ್ಟಿರುವ ಕಾರಣ, ಬೆಂಗಳೂರು ಸೇಫ್ ಅಲ್ಲ ಅನ್ನೋದು. ಬೆಂಗಳೂರಿನ ಖ್ಯಾತಿಗೆ ಮಸಿ ಬಳಿಯುವ ಯತ್ನ ಇದು ಅನ್ನೋದ್ರಲ್ಲಿ ಆನುಮಾನವೇ ಇಲ್ಲ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಈತನಿಗೆ ಭಯ ತಂದಿವೆಯಂತೆ. ಅದಕ್ಕೆ ಚಾನ್ಸ್ ತೆಗೆದುಕೊಳ್ಳುವುದು ಏಕೆ ಎಂದು ಡೆವಿಡ್ ಗೆಟ್ಟಾ, ಸಂಗೀತ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದ್ದಾರೆ. ಆದರೆ, ಈತನ ಮುಂಬೈ, ಹೈದರಾಬಾದ್ ಮತ್ತು ನವದೆಹಲಿಗಳು ಸೇಫ್ ಎನ್ನಿಸಿವೆ. ಹಾಗಾಗಿ ಅಲ್ಲಿ ಫಿಕ್ಸ್ ಆಗಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಿಲ್ಲ.
ಇನ್ನೊಂದ್ ಕಡೆ ಡಿಸ್ಕೋ ಜಾಕಿ ಮ್ಯೂಸಿಕ್ ನೈಟ್ ಕ್ಯಾನ್ಸಲ್ ವಿಚಾರವಾಗಿ ಬೆಂಗಳೂರು ಪೊಲೀಸ್ರು ಸ್ಪಷ್ಟನೆ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರದ ಹಲವು ಕಡೆ ಎಪಿಎಂಸಿ ಚುನಾವಣೆ ಇದೆ. ಹೀಗಾಗಿ, ಅಗತ್ಯ ಪೊಲೀಸ್ ಭದ್ರತೆ ಕಲ್ಪಿಸಲಾಗಿಲ್ಲ ಅಂತ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ ಕೊಟ್ಟಿದ್ದಾರೆ.. ಅಲ್ಲದೆ, ಮಂಗಳವಾರ ಮಾತ್ರ ಕಾರ್ಯಕ್ರಮಕ್ಕೆ ಅನುಮತಿ ಕೇಳಿದ್ದರು.. ಹೀಗಾಗಿ ಗೊಂದಲ ಮೂಡಿ ಪರ್ಮಿಟ್ ನಿರಾಕರಿಸಲಾಗಿದೆ ಅಂತ ಹೇಳಿದ್ದಾರೆ. ಕಾರ್ಯಕ್ರಮವನ್ನ ಮುಂದೂಡಿಕೆಗೆ ಪೊಲೀಸರು ತಿಳಿಸಿದ್ದರು. ಆದರೆ, ಇದೀಗ ಕಾರ್ಯಕ್ರಮ ಕ್ಯಾನ್ಸಲ್ ಮಾಡಿ ಬೆಂಗಳೂರು ಸೇಫ್ ಅಲ್ಲವೆಂದು ಕಾರಣ ನೀಡಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಮಧ್ಯೆ, ಡಿಜೆಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಸುದ್ದಿಯನ್ನ ರಾಷ್ಟ್ರೀಯ ವಾಹಿನಿಗಳು ಹೈಲೇಟ್ ಮಾಡುತ್ತಿವೆ. ವಲಸಿಗರು ಬಂದು ಇಲ್ಲಿ ಮಾಡುತ್ತಿರುವ ವಲಸಿಗೆ ಕನ್ನಡಿಗರು ಹೇಗೆ ಹೊಣೆಯಾಗುತ್ತಾರೆ..? ಕನ್ನಡಿಗರ ಮೇಲೆ ಗೂಬೆ ಕೂರಿಸುವುದನ್ನ ರಾಷ್ಟ್ರೀಯ ಮಾಧ್ಯಮಗಳು ಬಿಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.