ಇಂಗ್ಲಿಷ್ ಅರ್ಥಕೋಶದಲ್ಲಿ ಸ್ಥಾನ ಪಡೆದ ‘ಅಯ್ಯೋ’!

Published : Oct 06, 2016, 06:46 PM ISTUpdated : Apr 11, 2018, 12:40 PM IST
ಇಂಗ್ಲಿಷ್ ಅರ್ಥಕೋಶದಲ್ಲಿ ಸ್ಥಾನ ಪಡೆದ ‘ಅಯ್ಯೋ’!

ಸಾರಾಂಶ

ನವದೆಹಲಿ(ಅ.6): ಈ ಪದವನ್ನು ನಾವು ಸಂದರ್ಭಕ್ಕೆ ತಕ್ಕಂತೆ, ಭಿನ್ನ ಭಿನ್ನ ಭಾವಗಳಲ್ಲಿ ಸದಾ ಬಳಸುತ್ತಿರುತ್ತೇವೆ. ದಕ್ಷಿಣ ಭಾರತದ ಜನಪ್ರಿಯ ಬಳಕೆಯ ಪದವಾದ ಈ ಪದಕ್ಕೆ ಇದೀಗ ಆಕ್ಸ್‌ರ್ಡ್ ನಿಗಂಟು ಸೇರುವ ಭಾಗ್ಯ ದೊರೆತಿದೆ. ಹೌದು, ದಕ್ಷಿಣ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ‘ಅಯ್ಯೋ’ ಪದ ಆಕ್ಸ್‌ರ್ಡ್ ಇಂಗ್ಲಿಷ್ ಅರ್ಥಕೋಶದಲ್ಲಿ ಸೇರಿಸಲ್ಪಟ್ಟಿದೆ ಎಂದು ‘ದ ಹಿಂದೂ’ ವರದಿ ಮಾಡಿದೆ.

ಸೆಪ್ಟಂಬರ್‌ನಲ್ಲಿ ಬಿಡುಗಡೆಗೊಂಡ ಇತ್ತೀಚಿನ ಹೊಸ ಆವೃತ್ತಿಯಲ್ಲಿ ಆಕ್ಸ್‌ರ್ಡ್ ಇಂಗ್ಲಿಷ್ ಅರ್ಥಕೋಶದಲ್ಲಿ ‘ಅಯ್ಯೋ’ ಮತ್ತು ‘ಅಯ್ಯಾ’ ಎಂಬ ಪದ ಸೇರ್ಪಡೆಗೊಂಡಿದೆ. ಇಂಗ್ಲಿಷ್ ಮಾತನಾಡುವವರ ಜಗತ್ತಿನಲ್ಲಿ, ಸರಿಯಾದ ಇಂಗ್ಲಿಷ್ ಅರ್ಥ ನೀಡುತ್ತದೆ ಎಂದು ನಂಬಲಾಗಿರುವ ಆಕ್ಸ್‌ರ್ಡ್ ಇಂಗ್ಲಿಷ್ ಅರ್ಥಕೋಶದಲ್ಲಿ ದಕ್ಷಿಣ ಭಾರತದ ಎರಡು ಪದಗಳಿಗೆ ಸ್ಥಾನ ಸಿಕ್ಕಿರುವುದು ವಿಶೇಷವಾಗಿದೆ.

ಈ ಪದಗಳಿಗೆ ಭಿನ್ನ ಭಾವಾರ್ಥಗಳಿದ್ದು ಅವುಗಳನ್ನೂ ವಿವರಿಸಲಾಗಿದೆ. ಪದ ಉಲ್ಲೇಖದ ಧ್ವನಿಯಲ್ಲಿರುವ ಭಾವವನ್ನು ಅನುಸರಿಸಿ ಈ ಪದದ ಅರ್ಥವನ್ನು ಭಾವಿಸಬಹುದಾಗಿದೆ. ಕಿರಿಕಿರಿ ಅನುಭವಿಸುವುದು, ಅಸಹ್ಯ ಪಡುವುದು, ಆಶ್ಚರ್ಯ ಅಥವಾ ಅನಿರೀಕ್ಷಿತ ಭಾವನೆ ವ್ಯಕ್ತಪಡಿಸುವುದು, ನಿರಾಸೆ, ನೋವು, ಹತಾಶೆ, ಸಂಕಟವನ್ನು ವ್ಯಕ್ತಪಡಿಸುವ ಅರ್ಥಗಳು ಈ ಪದಗಳಿಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಟೈಲಿಶ್ ಲುಕ್ ಮತ್ತು ಸ್ಮಾರ್ಟ್ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬಂದ ಟಿವಿಎಸ್ ಎನ್‌ಟಾರ್ಕ್ 150
ಮುಂದಿನ ಪೀಳಿಗೆಗಾಗಿ ತುಂಗಭದ್ರಾ ನದಿಯನ್ನು ರಕ್ಷಿಸಿ: ಸಚಿವ ಶಿವರಾಜ ತಂಗಡಗಿ