ರ‌್ಯಾಗಿಂಗ್ ಮಾಡಿದ್ರೆ ಕಾಲೇಜಿಂದ ಔಟ್

Published : Mar 09, 2017, 07:53 AM ISTUpdated : Apr 11, 2018, 12:40 PM IST
ರ‌್ಯಾಗಿಂಗ್ ಮಾಡಿದ್ರೆ ಕಾಲೇಜಿಂದ ಔಟ್

ಸಾರಾಂಶ

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುವ ಪರಿಪಾಠ ವ್ಯಾಪಕವಾಗಿದೆ. ಒತ್ತಡವನ್ನು ತಡೆಯಲಾಗದೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ.

ನವದೆಹಲಿ(ಮಾ.09): ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸಹಪಾಠಿಗಳನ್ನು ಜಾತಿ, ಧರ್ಮ, ಜನಾಂಗೀಯ ಮತ್ತು ಲಿಂಗಭೇದಕ್ಕೆ ಗುರಿಪಡಿಸಿದಲ್ಲಿ, ಅಂಥ ವಿದ್ಯಾರ್ಥಿಗಳನ್ನು ವಜಾ ಮಾಡಬಹುದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ರ‌್ಯಾಗಿಂಗ್ ತಡೆಯುವ ನಿಟ್ಟಿನಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಬಿಡುಗಡೆಗೊಳಿಸಿರುವ ಹೊಸ ಶೈಕ್ಷಣಿಕ ವರ್ಷದ ಮಾರ್ಗಸೂಚಿಗಳಲ್ಲಿ ಈ ವಿಷಯ ತಿಳಿಸಲಾಗಿದೆ.
ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುವ ಪರಿಪಾಠ ವ್ಯಾಪಕವಾಗಿದೆ. ಒತ್ತಡವನ್ನು ತಡೆಯಲಾಗದೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ. ಎಐಸಿಟಿಇ ಬಿಡುಗಡೆ ಗೊಳಿಸಿರುವ ಸುತ್ತೋಲೆಯಲ್ಲಿ ಯಾವುದೆಲ್ಲ ನಿಂದ ನಾತ್ಮಕ ಪದಗಳೆಂಬ ಪಟ್ಟಿಯನ್ನೂ ನೀಡಲಾಗಿದೆ. ಅಲ್ಲದೆ ರ‌್ಯಾಗಿಂಗ್'ನ ವ್ಯಾಖ್ಯಾನವನ್ನೂ ನೀಡಲಾಗಿದೆ. ತಪ್ಪಿತಸ್ಥ ವಿದ್ಯಾರ್ಥಿಗಳನ್ನು ನಿರ್ಧಿಷ್ಟ ಅವಧಿಗೆ ಅಮಾನತುಗೊಳಿಸಬಹುದು, ಕಾಲೇಜಿ ನಿಂದಲೇ ಹೊರಹಾಕಬಹುದು ಮತ್ತು ಗಂಭೀರ ಪ್ರಕರಣಗಳಲ್ಲಿ ನೋಂದಣಿಯನ್ನೇ ರದ್ದುಗೊಳಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಡಿಕೆ ಅನುಭವದಲ್ಲಿ ಇರುವುದು ಆತ್ಮರತಿಯ ಕೊಚ್ಚೆ : ಡಿಕೆ ಗುಡುಗು
ನಂಬಿಕೆಗಿಂತ ದೊಡ್ಡ ಗುಣ ಬೇರೆ ಇಲ್ಲ, ತಾಳ್ಮೆ ಇದ್ದರೆ ಜಗತ್ತೇ ಗೆಲ್ಲಬಹುದು : ಡಿಕೆ