
ಪ್ಯಾರಿಸ್(ಮೇ 08): ಹೊಸ ಸವಾಲುಗಳನ್ನು ಎದುರಿಸುತ್ತಿರುವ ಫ್ರಾನ್ಸ್ ದೇಶಕ್ಕೆ ಹೊಸ ಸಾರಥಿ ಸಿಕ್ಕಿದ್ದಾರೆ. ಇಮ್ಯಾನುಯೆಲ್ ಮೆಕ್ರೋನ್ ಅವರು ಫ್ರಾನ್ಸ್'ನ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. 39 ವರ್ಷದ ಮೆಕ್ರೋನ್ ಅವರು ಫ್ರಾನ್ಸ್'ನ ಅತ್ಯಂತ ಕಿರಿಯ ಅಧ್ಯಕ್ಷರೆನಿಸಿದ್ದಾರೆ. ನೆಪೋಲಿಯನ್-3 1852ನೇ ಇಸವಿಯಲ್ಲಿ ತಮ್ಮ 45ನೇ ವಯಸ್ಸಿನಲ್ಲಿ ಫ್ರಾನ್ಸ್ ಅಧ್ಯಕ್ಷರಾಗಿದ್ದರು. ಇದೀಗ ಅವರ ದಾಖಲೆಯನ್ನು ಮೆಕ್ರೋನ್ ಮುರಿದಿದ್ದಾರೆ.
ಫ್ರಾನ್ಸ್ ದೇಶವನ್ನು 60 ವರ್ಷಗಳ ಕಾಲ ಆಳಿದ್ದು ಎಡಪಂಥೀಯ ಮತ್ತು ಬಲಪಂಥೀಯ ಪಕ್ಷಗಳೇ. ಆದರೆ, ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ಇವೆರಡೂ ಗುಂಪುಗಳಿಗೆ ಸೇರದೇ ಮಧ್ಯಮಮಾರ್ಗವಾದ ಸೋಷಿಯಲಿಸ್ಟ್ ಪಥದಲ್ಲಿ ಬಂದವರು. ಇವರ ರಾಜಕೀಯ ಜೀವನ ಒಂದು ರೀತಿಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ರಾಜೀವ್ ಗಾಂಧಿಗೆ ಹೋಲಿಕೆಯಾಗುತ್ತದೆ. ರಾಜೀವ್ ಗಾಂಧಿಯಂತೆ ಯಾವುದೇ ಚುನಾಯಿತ ಹುದ್ದೆಯ ಜವಾಬ್ದಾರಿ ಇಲ್ಲದೆಯೇ ದೇಶದ ಅತ್ಯುಚ್ಚ ಅಧಿಕಾರ ಪಡೆದಿದ್ದಾರೆ. ಅರವಿಂದ್ ಕೇಜ್ರಿವಾಲ್'ರಂತೆ ದೇಶದ ಸರಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಆನಂತರ ರಾಜಕಾರಣಕ್ಕೆ ಬಂದವರಾಗಿದ್ದಾರೆ.
ಹಿಂದಿನ ಹಾಲೆಂಡೆ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಇಮ್ಯಾನುಯೆಲ್ ಮ್ಯಾಕ್ರನ್, ಒಂದು ವರ್ಷದ ಹಿಂದಷ್ಟೇ ಪ್ರಗತಿಪರ ಚಿಂತನೆಯುಳ್ಳ "ಎನ್ ಮಾರ್ಷೆ" ಎಂಬ ಹೊಸ ಪಕ್ಷ ಸ್ಥಾಪಿಸಿದ್ದರು. ಪ್ರಜಾತಾಂತ್ರಿಕ ಕ್ರಾಂತಿ ಮತ್ತು ಒಗ್ಗಟ್ಟಿನ ಭರವಸೆಯನ್ನು ಜನತೆ ನೀಡಿದರು. ಮಾಕ್ರೋನ್'ಗೆ ವಿವಿಧ ಪ್ರಮುಖರ ಬೆಂಬಲ ವ್ಯಕ್ತಪಡಿಸಿದರು, ಶಿಫಾರಸು ಮಾಡಿದರು. ಜನತೆ ಕೂಡ ಮ್ಯಾಕ್ರೋನ್'ಗೆ ಶೇ.66ರಷ್ಟು ಮತ ಕೊಟ್ಟು ಗೆಲ್ಲಿಸಿದರು.
ಇದೇ ವೇಳೆ, ತಾನು ಫ್ರಾನ್ಸ್'ನ ಅಧ್ಯಕ್ಷನಾಗಿ ದೇಶದ ಒಡಕನ್ನು ಸರಿಪಡಿಸುವ ಆಶ್ವಾಸನೆ ನೀಡಿದ್ದಾರೆ. ಐರೋಪ್ಯ ಒಕ್ಕೂಟದ ಒಗ್ಗಟ್ಟಿಗೆ ಶ್ರಮಿಸುವುದಾಗಿಯೂ ಅವರು ಪಣ ತೊಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.