
ದುಬೈ: ಮನೆ, ಕಾರು, ಟೀವಿ, ರೆಫ್ರಿಜರೇಟರ್, ಮೊಬೈಲ್ ಫೋನ್‌ಗಳನ್ನು ಮಾಸಿಕ ಕಂತುಗಳಲ್ಲಿ ಖರೀದಿಸುವ ಆಯ್ಕೆ ಹಳತಾಯಿತು.
ಇನ್ನು ಮುಂದೆ ವಿಮಾನ ಟಿಕೆಟ್‌ಗಳನ್ನೂ ‘ಇಎಂಐ’ (ಮಾಸಿಕ ಸಮಾನ ಕಂತು) ಆಯ್ಕೆಯಡಿ ಖರೀದಿಸುವ ಅವಕಾಶವನ್ನು ಇದೇ ಮೊದಲ ಬಾರಿಗೆ ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಮೂಲದ ಎತಿಹಾದ್ ಏರ್‌ವೇಸ್ ಆರಂಭಿಸಿದೆ.
‘ಈಗ ವಿಮಾನದಲ್ಲಿ ಪ್ರಯಾಣಿಸಿ, ಬಳಿಕ ಪಾವತಿಸಿ’ ಎಂಬ ಯೋಜನೆ ಇದಾಗಿದೆ. ಇದರಡಿ ಆನ್‌ಲೈನ್ ಮೂಲಕ ವಿಮಾನ ಟಿಕೆಟ್ ಕಾದಿರಿಸುವವರು ‘ಕಂತುಗಳಲ್ಲಿ ಪಾವತಿ’ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.