
ವಾಷಿಂಗ್ಟನ್: ಎಲಾನ್ ಮಸ್ಕ್ ನೇತೃತ್ವದ ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್ ಇತ್ತೀಚೆಗೆ ಶಕ್ತಿಶಾಲಿ ರಾಕೆಟ್ ಒಂದನ್ನು ಯಶಸ್ವಿಯಾಗಿ ಉಡ್ಡಯನ ಮಾಡಿತ್ತು.
ಇದರ ಜೊತೆಯಲ್ಲಿ ಅವರದ್ದೇ ಆದ ಟೆಸ್ಲಾ ಕಂಪನಿಯ ಕಾರೊಂದನ್ನು ಪ್ರಾಯೋಗಿಕವಾಗಿ ಹಾರಿಬಿಡಲಾಗಿತ್ತು. ಈ ಕುರಿತು ಚಿತ್ರಗಳನ್ನು ಕೂಡಾ ಮಸ್ಕ್ ಬಿಡುಗಡೆ ಮಾಡಿದ್ದರು. ಆದರೆ ಕೆಲವೆಡೆ, ಇದೊಂದು ಸುಳ್ಳು ಪ್ರಚಾರದ ತಂತ್ರ. ಸ್ಟುಡಿಯೋದಲ್ಲೇ ತಂತ್ರಜ್ಞಾನದ ಮೂಲಕ ಬಾಹ್ಯಾಕಾಶದ ಚಿತ್ರಣ ಸೃಷ್ಟಿಮಾಡಿ ಕಾರನ್ನು ತೋರಿಸಲಾಗಿದೆ ಎಂದೆಲ್ಲಾ ಹೇಳಲಾಗಿತ್ತು.
ಆದರೆ ಈ ಊಹೆ ತಪ್ಪು. ನಿಜವಾಗಿಯೂ ಕಾರನ್ನು ಉಡ್ಡಯನ ಮಾಡಲಾಗಿದೆ ಎಂಬುದು ಇದೀಗ ಸಾಬೀತಾಗಿದೆ. ಅರಿಜೋನಾದ ಟೆನಾಗ್ರಾ ವೀಕ್ಷಣಾಲಯದ ರೊಬೊಟೀಕೃತ ಟೆಲಿಸ್ಕೋಪ್‌ನಲ್ಲಿ ವೀಕ್ಷಿಸಿದಾಗ ಆಕಾಶದಲ್ಲಿ ಕಾರು ಚಲಿಸುತ್ತಿರುವುದು ಕಂಡು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.