ಆತಿಥ್ಯವಿಲ್ಲದೆ ಸೊರಗುತ್ತಿವೆ ಆನೆಗಳು: ಮಾವುತರು ಹಾಗೂ ಆನೆಗಳ ಪರದಾಟ

Published : Oct 11, 2016, 06:39 AM ISTUpdated : Apr 11, 2018, 12:36 PM IST
ಆತಿಥ್ಯವಿಲ್ಲದೆ ಸೊರಗುತ್ತಿವೆ ಆನೆಗಳು: ಮಾವುತರು ಹಾಗೂ ಆನೆಗಳ ಪರದಾಟ

ಸಾರಾಂಶ

ಮಹಾನಗರ ಪಾಲಿಕೆ ಪ್ರತಿ ವರ್ಷದಂತೆ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಆನೆಗಳನ್ನು ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರಲು ಕರೆ ತರಲಾಗುತ್ತಿತ್ತು. ಹಾಗೆಯೇ ಈ ಬಾರಿಯ ಕೂಡ ಬಿಡಾರದಿಂದ ಮೂರು ಆನೆಗಳನ್ನು ಸಿದ್ಧಗೊಳಿಸಲಾಗಿದೆ.  ಆದರೆ ವಿಜಯದಶಮಿಗೂ ಮೊದಲು ವಾರಗಳ ಹಿಂದೆಯೇ ಈ ಆನೆಗಳಿಗೆ ನೀಡಬೇಕಾದ ವಿಶೇಷ ಆಹಾರದ ವ್ಯವಸ್ಥೆಯನ್ನೇ ಪಾಲಿಕೆ ಮಾಡಿಲ್ಲ. ಹಾಗೆಯೇ ಆನೆಗಳೊಂದಿಗೆ ಬರುವ ಮಾವುತರಿಗೆ ಗೌರವ ಧನವನ್ನೂ ನೀಡಿಲ್ಲ. ಕಳೆದ ವರ್ಷವೂ ವಿಜಯದಶಮಿ ಮುಗಿದ ನಂತರ ಹೊಟ್ಟೆಗೆ ಆಹಾರವಿಲ್ಲದೆ ಮಾವುತರು ಮತ್ತು ಆನೆಗಳು ಬಿಡಾರಕ್ಕೆ ಉಪವಾಸದಿಂದಲೇ ಬರಬೇಕಾಗಿತ್ತು. ಈ ವರ್ಷವೂ ಕೂಡ ಅದೇ ಪುನಾರಾವರ್ತನೆ ಆಗುತ್ತಿರುವುದು ಬಿಡಾರದ ಮಾವುತರಲ್ಲಿ ಅಸಮಾಧಾನ ಮೂಡಿಸಿದೆ. ದಸರಾ ಕಾರ್ಯಕ್ರಮಗಳಿಗಾಗಿ ಲಕ್ಷಾಂತರ ರೂ. ಖರ್ಚು ಮಾಡುವ ಪಾಲಿಕೆ ಈ ರೀತಿ ನಿರ್ಲಕ್ಷ್ಯ ವಹಿಸಿ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಶಿವಮೊಗ್ಗ(ಅ.10): ನಾಡಹಬ್ಬ ಮೈಸೂರು ದಸರಾದ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಮೈಸೂರು ದಸರಾಗೆ ಬಂದಿರುವ ಗಜಪಡೆಗೆ ಭರ್ಜರಿ ರಾಜಾಥಿತ್ಯ ದೊರೆತಿದೆ. ಆದರೆ, ಶಿವಮೊಗ್ಗದ ದಸರಾದಲ್ಲಿ ಆನೆಗಳು ಮತ್ತು ಮಾವುತರನ್ನು ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಲಕ್ಷಿಸಿದೆ.

ಮಹಾನಗರ ಪಾಲಿಕೆ ಪ್ರತಿ ವರ್ಷದಂತೆ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಆನೆಗಳನ್ನು ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರಲು ಕರೆ ತರಲಾಗುತ್ತಿತ್ತು. ಹಾಗೆಯೇ ಈ ಬಾರಿಯ ಕೂಡ ಬಿಡಾರದಿಂದ ಮೂರು ಆನೆಗಳನ್ನು ಸಿದ್ಧಗೊಳಿಸಲಾಗಿದೆ.  ಆದರೆ ವಿಜಯದಶಮಿಗೂ ಮೊದಲು ವಾರಗಳ ಹಿಂದೆಯೇ ಈ ಆನೆಗಳಿಗೆ ನೀಡಬೇಕಾದ ವಿಶೇಷ ಆಹಾರದ ವ್ಯವಸ್ಥೆಯನ್ನೇ ಪಾಲಿಕೆ ಮಾಡಿಲ್ಲ. ಹಾಗೆಯೇ ಆನೆಗಳೊಂದಿಗೆ ಬರುವ ಮಾವುತರಿಗೆ ಗೌರವ ಧನವನ್ನೂ ನೀಡಿಲ್ಲ.

ಕಳೆದ ವರ್ಷವೂ ವಿಜಯದಶಮಿ ಮುಗಿದ ನಂತರ ಹೊಟ್ಟೆಗೆ ಆಹಾರವಿಲ್ಲದೆ ಮಾವುತರು ಮತ್ತು ಆನೆಗಳು ಬಿಡಾರಕ್ಕೆ ಉಪವಾಸದಿಂದಲೇ ಬರಬೇಕಾಗಿತ್ತು. ಈ ವರ್ಷವೂ ಕೂಡ ಅದೇ ಪುನಾರಾವರ್ತನೆ ಆಗುತ್ತಿರುವುದು ಬಿಡಾರದ ಮಾವುತರಲ್ಲಿ ಅಸಮಾಧಾನ ಮೂಡಿಸಿದೆ. ದಸರಾ ಕಾರ್ಯಕ್ರಮಗಳಿಗಾಗಿ ಲಕ್ಷಾಂತರ ರೂ. ಖರ್ಚು ಮಾಡುವ ಪಾಲಿಕೆ ಈ ರೀತಿ ನಿರ್ಲಕ್ಷ್ಯ ವಹಿಸಿ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ