ಇಡಿಯ ಕಾಶ್ಮೀರ ನಮ್ಮದು: ಆರೆಸ್ಸೆಸ್ ಮುಖ್ಯಸ್ಥ ಭಾಗವತ್

By Web DeskFirst Published Oct 11, 2016, 6:10 AM IST
Highlights

'ಭಾರತವು ಪ್ರಗತಿ ಹೊಂದುತ್ತಿದೆ. ಕೆಲವು ದೇಶಗಳಿಗೆ ಈ ಪ್ರಗತಿಯನ್ನು ಸಹಿಸಲಾಗುತ್ತಿಲ್ಲ. ಕಾಶ್ಮೀರವು ಗಂಭೀರವಾದ ವಿಷಯ, ಹಾಗೂ ಅದು ಭಾರತದ ಅವಿಭಾಜ್ಯ ಅಂಗವಾಗಿದೆ'

ನಾಗಪುರ (ಅ.11): ಪಾಕಿಸ್ತಾನವು ಕಾಶ್ಮೀರ ಕಣಿವೆಯಲ್ಲಿ ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂದಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಗಿಲ್ಗಿಟ್-ಬಾಲಿಸ್ತಾನ್’ಗಳನ್ನು ಒಳಗೊಂಡಂತೆ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದಾರೆ.

ವಿಜಯದಶಮಿ ದಿನದಂದು ಸಂಘದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಭಾಗವತ್,  ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನವು ಹೊಣೆಯೆಂಬುವುದು ಇಡಿ ಜಗತ್ತಿಗೆ ಗೊತ್ತಿದೆ ಎಂದು ಹೇಳಿದ್ದಾರೆ.

Latest Videos

ಭಾರತವು ಪ್ರಗತಿ ಹೊಂದುತ್ತಿದೆ. ಕೆಲವು ದೇಶಗಳಿಗೆ ಈ ಪ್ರಗತಿಯನ್ನು ಸಹಿಸಲಾಗುತ್ತಿಲ್ಲ. ಕಾಶ್ಮೀರವು ಗಂಭೀರವಾದ ವಿಷಯ, ಹಾಗೂ ಅದು ಭಾರತದ ಅವಿಭಾಜ್ಯ ಅಂಗವಾಗಿದೆ, ಎಂದು ಭಾಗವತ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಹಿಂಸೆಯನ್ನು ಪ್ರಚೋದಿಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಭಾಗವತ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

click me!