
ಬ್ಯಾಂಕಾಕ್(ಅ.22): ಗಂಡಾಂತರದಲ್ಲಿ ಸಿಲುಕಿದ ಪ್ರಾಣಿಗಳನ್ನು ಮನುಷ್ಯರು ರಕ್ಷಿಸುವುದು ಸಾಮಾನ್ಯ ಸಂಗತಿ. ಆದರೆ, ಅಪಾಯದಲ್ಲಿರುವ ಮಾನವನ ಜೀವ ಉಳಿಸಲು ಪ್ರಾಣಿಗಳೂ ಮುಂದಾಗಿರುವ ಪ್ರಕರಣಗಳು ತುಂಬ ವಿರಳ. ವಿರಳವಾದರೂ ಅಚ್ಚರಿಪಡಿಸುವ ಘಟನೆಯೊಂದು ಥಾಯ್ಲೆಂಡ್'ನಲ್ಲಿ ನಡೆದಿದೆ.
ಉತ್ತರ ಥಾಯ್ಲೆಂಡ್'ನ ಎಲಿಫೆಂಟ್ ನೇಚರ್ ಪಾರ್ಕ್'ನಲ್ಲಿ ಅನೆಗಳ ತರಬೇತುದಾರ ಡಾರ್ರಿಕ್ ಈಜಲು ನೀರಿಗೆ ಇಳಿದ. ನೀರಿನ ಪ್ರವಾಹವೂ ಜೋರಾಗಿತ್ತು. ಇದನ್ನು ಖಾಮ್ ಲ್ಹಾ ಎಂಬ ಹೆಣ್ಣು ಮರಿಯಾನೆ ನೋಡಿತ್ತು. ಕೂಡಲೇ ನದಿಗೆ ಇಳಿದು ನದಿಯಲ್ಲಿ ಈಜಾಡುತ್ತಿದ್ದ ಡಾರ್ರಿಕ್ ನೀರಿನಲ್ಲಿ ಮುಳುಗಿ ಸಾಯುತ್ತಾನೆ ಎಂದು ಭಾವಿಸಿ ಪ್ರವಾಹವನ್ನೂ ಲೆಕ್ಕಿಸದೇ ಆತನ ಬಳಿ ಧಾವಿಸಿ ಆತನನ್ನು ರಕ್ಷಿಸಲು ಯತ್ನಿಸಿದೆ.
ಆನೆ ಮರಿಯ ಕಾಳಜಿಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.