ಆನೆ ಹಣವೆಲ್ಲಾ ನುಂಗಿತು; ಸೈಕಲ್ ಪಂಚರ್ ಆಯ್ತು: ರಾಹುಲ್ ಗಾಂಧಿ ಮಸ್ತ್ ಡೈಲಾಗ್

Published : Sep 11, 2016, 12:34 PM ISTUpdated : Apr 11, 2018, 01:01 PM IST
ಆನೆ ಹಣವೆಲ್ಲಾ ನುಂಗಿತು; ಸೈಕಲ್ ಪಂಚರ್ ಆಯ್ತು: ರಾಹುಲ್ ಗಾಂಧಿ ಮಸ್ತ್ ಡೈಲಾಗ್

ಸಾರಾಂಶ

"ನರೇಂದ್ರ ಮೋದಿಯವರು ರೈತರ ಜೊತೆ ಫೋಟೋ ಕ್ಲಿಕ್ಕಿಸುವುದನ್ನು ಎಂದಾದರೂ ನೋಡಿದ್ದೀರಾ? ಅವರ 15 ಲಕ್ಷದ ಬಟ್ಟೆ ಕೊಳೆಯಾಗುತ್ತದೆಂಬ ಆತಂಕದಿಂದ ಅವರು ನಿಮ್ಮ ಬಳಿಗೆ ಬರುವುದಿಲ್ಲ. ಆದರೆ, ಅಮೆರಿಕಕ್ಕೆ ಹೋಗಿ ಒಬಾಮರನ್ನು ಭೇಟಿಯಾಗುತ್ತಾರೆ"

ಅಜಮ್'ಗಡ್(ಸೆ. 11): ಕಾಂಗ್ರೆಸ್ ಪಾಲಿಗೆ ದುರ್ಬಲ ಕೋಟೆ ಎನಿಸಿರುವ ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ ರೈತರ ಸಭೆಗಳನ್ನು ಭರ್ಜರಿಯಾಗಿ ಮುಂದುವರಿಸಿದ್ದಾರೆ. ಆರನೇ ದಿನದ ರೈತ ಯಾತ್ರೆಯಲ್ಲಿ ಸಮಾಜವಾದಿ ಪಕ್ಷ, ಬಿಎಸ್'ಪಿ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್  ಉಪಾಧ್ಯಕ್ಷರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯಥಾಪ್ರಕಾರ ನರೇಂದ್ರ ಮೋದಿ ವಿರುದ್ಧ ಸೂಟು ಬೂಟು ಟೀಕೆ ಮುಂದುವರಿಸಿದ್ದಾರೆ.

ಮೋದಿ ಬಗ್ಗೆ:
"ನರೇಂದ್ರ ಮೋದಿಯವರು ರೈತರ ಜೊತೆ ಫೋಟೋ ಕ್ಲಿಕ್ಕಿಸುವುದನ್ನು ಎಂದಾದರೂ ನೋಡಿದ್ದೀರಾ? ಅವರ 15 ಲಕ್ಷದ ಬಟ್ಟೆ ಕೊಳೆಯಾಗುತ್ತದೆಂಬ ಆತಂಕದಿಂದ ಅವರು ನಿಮ್ಮ ಬಳಿಗೆ ಬರುವುದಿಲ್ಲ. ಆದರೆ, ಅಮೆರಿಕಕ್ಕೆ ಹೋಗಿ ಒಬಾಮರನ್ನು ಭೇಟಿಯಾಗುತ್ತಾರೆ" ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

"ಪ್ರತಿಯೊಬ್ಬರ ಬ್ಯಾಂಕ್ ಅಕೌಂಟ್'ಗಳಿಗೂ 15 ಲಕ್ಷ ರೂ., ಯುವಕರಿಗೆ ಉದ್ಯೋಗ ಮತ್ತು ಬುಲೆಟ್ ರೈಲುಗಳ ಬಗ್ಗೆ ದೊಡ್ಡದೊಡ್ಡ ಭರವಸೆ ನೀಡಿದ್ದರು. ಜನತೆಗೆ ಯಾವಾಗ ಸಿಗುತ್ತದೆ 15 ಲಕ್ಷ? ಯುವಕರಿಗೆ ಯಾವಾಗ ಸಿಗುತ್ತೆ ಉದ್ಯೋಗ? ಯಾವಾಗ ಓಡುತ್ತವೆ ಬುಲೆಟ್ ರೈಲುಗಳು?" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

"ಮೋದಿ ತಮ್ಮದೇ ಪ್ರಪಂಚದಲ್ಲಿ ಖುಷಿಯಾಗಿದ್ದಾರೆ. ಒಂದೆಡೆ, ಜನರು ತೊಂದರೆಯಲ್ಲಿದ್ದಾರೆ, ಇನ್ನೊಂದೆಡೆ ಮೋದಿಜೀ ಸಂತಸದಲ್ಲಿ ತೇಲುತ್ತಿದ್ದಾರೆ. ಅವರ ಗಮನವೆಲ್ಲವೂ ಅಮೆರಿಕ ಅಥವಾ ಜಪಾನ್ ಮೇಲೆಯೇ ಇರುತ್ತದೆ," ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ..

ಬಿಎಸ್'ಪಿ ಬಗ್ಗೆ: "ಆನೆ (ಬಿಎಸ್'ಪಿಯ ಚುನಾವಣಾ ಚಿಹ್ನೆ) ಎಲ್ಲಾ ಹಣವನ್ನೂ ನುಂಗಿಹಾಕಿತು. ನೀವು ಅದನ್ನು ಓಡಿಸಿದಿರಿ," ಎಂದು ಕು. ಮಾಯಾವತಿಯವರ ಬಹುಜನ ಸಮಾಜ ಪಕ್ಷದ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷರು ವಾಗ್ದಾಳಿ ನಡೆಸಿದ್ದಾರೆ.

ಎಸ್'ಪಿ ಬಗ್ಗೆ:
"ಆನೆಯನ್ನು ಓಡಿಸಿ ಸೈಕಲ್ ತಂದಿರಿ. ಈ ಸೈಕಲ್ಲು ಪಂಚರ್ ಆಗಿದೆಯೋ, ಅಥವಾ ಎಲ್ಲಿಯಾದರೂ ಸಿಕ್ಕಿಕೊಂಡಿದೆಯೋ ಗೊತ್ತಿಲ್ಲ. ಆದರೆ, ಚಲಿಸದೇ ನಿಂತುಬಿಟ್ಟಿದೆ. ಈ ಸಮಾಜವಾದಿ ಪಕ್ಷ ನಿಮಗೆ ರೇಷನ್ ಕಾರ್ಡ್ ಕೊಡಲು ವಿಫಲವಾಗಿದೆ," ಎಂದು ಹಾಲಿ ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

"ನೀವೀಗ ಕೈಹಿಡಿಯುವ ಕಾಲ ಬಂದಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ರೇಷನ್ ಕಾರ್ಡ್ ಮತ್ತು ರೈತರ ಬಗ್ಗೆ ಏನೇನು ಮಾಡುತ್ತೀವಿ ನೋಡ್ತೀರಿ," ಎಂದು ಗಾಂಧಿ ಭರವಸೆ ನೀಡಿದ್ದಾರೆ.

ರಾಹುಲ್ ಗಾಂಧಿ 2,500 ಕಿಮೀ ದೂರದ ದೇವೋರಿಯಾ ಟೂ ಡೆಲ್ಲಿ ರೈತ ಯಾತ್ರೆ ನಡೆಸುತ್ತಿದ್ದು, ಇಂದು ಅದರ ಆರನೇ ದಿನವಾಗಿದೆ.

(ಮಾಹಿತಿ: ಪಿಟಿಐ ಸುದ್ದಿಸಂಸ್ಥೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!