ಎಲೆಕ್ಟ್ರೋರಲ್ ಟ್ರಸ್ಟ್’ನಿಂದ ಬಿಜೆಪಿಗೆ 488 ಕೋಟಿ ದೇಣಿಗೆ

By Suvarna Web DeskFirst Published Jan 30, 2018, 10:16 AM IST
Highlights

ಕಳೆದ ನಾಲ್ಕು ವರ್ಷಗಳಲ್ಲಿ ಒಂಬತ್ತು ಎಲೆಕ್ಟ್ರೋರಲ್ ಟ್ರಸ್ಟ್‌ಗಳು ವಿವಿಧ ರಾಜಕೀಯ ಪಕ್ಷಗಳಿಗೆ 637.54 ಕೋಟಿ ರು. ದೇಣಿಗೆ ನೀಡಿವೆ. ಅದರಲ್ಲಿ, 2013-14ರಿಂದ 2016-17ರ ಅವಧಿಯಲ್ಲಿ ಬಿಜೆಪಿ ಗರಿಷ್ಠ 488.94 ಕೋಟಿ ರು. ಮತ್ತು ಕಾಂಗ್ರೆಸ್ 86.65 ಕೋಟಿ ರು. ದೇಣಿಗೆ ಸ್ವೀಕರಿಸಿವೆ.

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಒಂಬತ್ತು ಎಲೆಕ್ಟ್ರೋರಲ್ ಟ್ರಸ್ಟ್‌ಗಳು ವಿವಿಧ ರಾಜಕೀಯ ಪಕ್ಷಗಳಿಗೆ 637.54 ಕೋಟಿ ರು. ದೇಣಿಗೆ ನೀಡಿವೆ. ಅದರಲ್ಲಿ, 2013-14ರಿಂದ 2016-17ರ ಅವಧಿಯಲ್ಲಿ ಬಿಜೆಪಿ ಗರಿಷ್ಠ 488.94 ಕೋಟಿ ರು. ಮತ್ತು ಕಾಂಗ್ರೆಸ್ 86.65 ಕೋಟಿ ರು. ದೇಣಿಗೆ ಸ್ವೀಕರಿಸಿವೆ.

ಐದು ರಾಷ್ಟ್ರೀಯ ಪಕ್ಷಗಳು ಒಟ್ಟು 588.44 ಕೋಟಿ ರು., 16 ಪ್ರಾದೇಶಿಕ ಪಕ್ಷಗಳು 49.09 ಕೋಟಿ ರು. ದೇಣಿಗೆ ಪಡೆದಿವೆ ಎಂದು ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಸ್ಥೆ (ಎಡಿಆರ್) ವರದಿಯಲ್ಲಿ ತಿಳಿಸಲಾಗಿದೆ. 2016-17ರ ಅವಧಿಯಲ್ಲಿ ಬಿಜೆಪಿ 290.22 ಕೋಟಿ ರು. ಮತ್ತು ಇತರ ಒಂಬತ್ತು ರಾಜಕೀಯ ಪಕ್ಷಗಳು 35.05 ಕೋಟಿ ರು. ಸ್ವೀಕರಿಸಿವೆ.

ನೋಂದಾಯಿತ ಲಾಭೇತರ ಕಂಪನಿಗಳು ಕಾರ್ಪೊರೇಟ್ ಅಥವಾ ವೈಯಕ್ತಿಕ ದೇಣಿಗೆದಾರನ ಇಚ್ಛೆಯನ್ನು ಆಧರಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತವೆ. ಇವುಗಳಿಗೆ ಇಲೆಕ್ಟೋರಲ್ ಟ್ರಸ್ಟ್‌ಗಳು ಎನ್ನುತ್ತಾರೆ.

click me!