2018ರಲ್ಲಿ ಅತಂತ್ರವಾಗುತ್ತಾ ರಾಜ್ಯ ವಿಧಾನಸಭೆ..?: ಎರಡನೇ ಸರ್ವೆಯಲ್ಲೂ ಬದಲಾಗಲಿಲ್ಲ ಭವಿಷ್ಯ..!

By Suvarna Web DeskFirst Published Oct 30, 2017, 12:17 PM IST
Highlights

2018ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಮೀಕ್ಷೆ ನಡೆಸಿದ್ದು, 224 ಕ್ಷೇತ್ರಗಳಲ್ಲಿ ಎರಡನೇ ಬಾರಿ ಸರ್ವೇ ಕಾಂಗ್ರೆಸ್ ಸಮೀಕ್ಷೆ ನಡೆಸಿದೆ. ಎರಡನೇ ಸರ್ವೇಯಲ್ಲೂ ಕಾಂಗ್ರೆಸ್'ಗೆ 80 ರಿಂದ 90 ಸ್ಥಾನ ಪಡೆಯುವ ಸುಳಿವು ಸಮೀಕ್ಷೆಯಿಂದ ಲಭ್ಯವಾಗಿದೆ.

ಬೆಂಗಳೂರು(ಅ.30): 2018ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಮೀಕ್ಷೆ ನಡೆಸಿದ್ದು, 224 ಕ್ಷೇತ್ರಗಳಲ್ಲಿ ಎರಡನೇ ಬಾರಿ ಸರ್ವೇ ಕಾಂಗ್ರೆಸ್ ಸಮೀಕ್ಷೆ ನಡೆಸಿದೆ. ಎರಡನೇ ಸರ್ವೇಯಲ್ಲೂ ಕಾಂಗ್ರೆಸ್'ಗೆ 80 ರಿಂದ 90 ಸ್ಥಾನ ಪಡೆಯುವ ಸುಳಿವು ಸಮೀಕ್ಷೆಯಿಂದ ಲಭ್ಯವಾಗಿದೆ.

ಮೊದಲನೇ ವರದಿಯಲ್ಲೂ ಹಾಲಿ ಶಾಸಕರ ಸೋಲಿನ ಬಗ್ಗೆ ಸರ್ವೆಯಲ್ಲಿ ಸುಳಿವು ಸಿಕ್ಕಿತ್ತು, ಇದೀಗ ಎರಡನೇ ಸರ್ವೇಯಲ್ಲೂ ಶಾಸಕರ ಭವಿಷ್ಯ ಬದಲಾಗಿಲ್ಲ. ಹೀಗಾಗೇ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಶಾಸಕರನ್ನು ಕರೆದು 'ಕೂಡಲೇ ಎಚ್ಚೆತ್ತುಕೊಳ್ಳಿ, ಎಲ್ಲಿ ತಪ್ಪಾಗಿದೆ ಅದನ್ನು ಸರಿಪಡಿಸಿಕೊಳ್ಳಿ' ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ತಪ್ಪಿದ್ದಲ್ಲಿ ಪರ್ಯಾಯ ಅಭ್ಯರ್ಥಿ ಕಣಕ್ಕಿಳಿಸುವ ಸುಳಿವನ್ನೂ ನೀಡಿರುವುದಾಗಿ ತಿಳಿದು ಬಂದಿದೆ.

ದೆಹಲಿ ಮೂಲದ ಸಂಸ್ಥೆಯಿಂದ ಕೆಪಿಸಿಸಿ ಈ ಸರ್ವೆ ನಡೆಸಿದೆ. ಇನ್ನು ಸಮೀಕ್ಷೆಯ ಅನುಸಾರ 2018ರ ಚುನಾವಣೆಯಲ್ಲಿ ವಿಧಾನಸಭೆ ಅತಂತ್ರವಾಗುವ ಸುಳಿವೂ ಲಭ್ಯವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

click me!