
ಭೋಪಾಲ್ : ಮಧ್ಯ ಪ್ರದೇಶದ ಮತದಾರರ ಪಟ್ಟಿಯಲ್ಲಿ ಒಟ್ಟು 6.7 ಲಕ್ಷ ಅನರ್ಹ ಮತದಾರರಿರುವುದು ಪತ್ತೆಯಾಗಿದೆ. ಮತದಾರರ ಪಟ್ಟಿ ಪರಿಶೀಲನೆ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ಮಾರ್ಚ್ 15ರಿಂದ ಏಪ್ರಿಲ್ 7ರವರೆಗೆ ನಡೆದ ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಇದರಲ್ಲಿ ಇರುವ ಅನೇಕ ಮತದಾರರು ಈಗಾಗಲೇ ಮೃತಪಟ್ಟಿದ್ದಾರೆ . ಅಲ್ಲದೇ ಕೆಲವರು 2 ಪ್ರದೇಶಗಳಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಕೆಲವರು ವಲಸೆ ಹೋಗಿದ್ದಾರೆ. ಇಂತಹ 6 ಲಕ್ಷಕ್ಕೂ ಅಧಿಕ ವೋಟರ್’ಗಳು ಪತ್ತೆಯಾಗಿದ್ದಾರೆ ಎಂದು ಮಧ್ಯ ಪ್ರದೇಶದ ಚುನಾವಣಾಧಿಕಾರಿ ಸಲಿನಾ ಸಿಂಗ್ ಹೇಳಿದ್ದಾರೆ.
ಹೊಸ ಚುನಾವಣಾ ಪಟ್ಟಿಯನ್ನು ಅಪಡೇಟ್ ಮಾಡುವ ವೇಳೆ ಈ ಎಲ್ಲಾ ಅಂಶಗಳು ಬೆಳಕಿಗೆ ಬಂದಿವೆ. ಈ ಎಲ್ಲಾ ಹೆಸರುಗಳನ್ನೂ ಕೂಡ ಶೀಘ್ರ ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನಿಡಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.