ಪಂಚ ರಾಜ್ಯಗಳ ರಾಜಕೀಯ ಸಮರಕ್ಕೆ ಅಖಾಡ ಸಿದ್ಧ: 2017 ರ ಬೃಹತ್ ಎಲೆಕ್ಷನ್'ಗೆ ಮುಹೂರ್ತ ಫಿಕ್ಸ್

Published : Jan 05, 2017, 02:48 AM ISTUpdated : Apr 11, 2018, 01:00 PM IST
ಪಂಚ ರಾಜ್ಯಗಳ ರಾಜಕೀಯ ಸಮರಕ್ಕೆ ಅಖಾಡ ಸಿದ್ಧ: 2017 ರ ಬೃಹತ್ ಎಲೆಕ್ಷನ್'ಗೆ ಮುಹೂರ್ತ ಫಿಕ್ಸ್

ಸಾರಾಂಶ

ಹೊಸ ವರ್ಷದಲ್ಲಿ ಬರುವ ಮೊದಲ ಬೃಹತ್ ಚುನಾವಣಾ ಸಮರಕ್ಕೆ ಈಗಾಗಲೇ ಮುಹೂರ್ತಫಿಕ್ಸ್ ಆಗಿದ್ದು, ಅದರ ಅಧಿಸೂಚನೆ ಇದೇ 11 ರಂದು ಹೊರಬೀಳಲಿದೆ. ಈ ಚುನಾವಣೆಗಾಗಿ ಈಗಾಗಲೇ ಪಂಚರಾಜ್ಯಗಳಲ್ಲು ಕಸರತ್ತು ಆರಂಭವಾಗಿದ್ದು, ಉತ್ತರಪ್ರದೇಶದಲ್ಲಂತೂ ಕುರುಕ್ಷೇತ್ರವೇ ಸೃಷ್ಟಿಯಾಗಿದೆ. ಇದಕ್ಕೆ ಹಿಂಬು ನೀಡುವಂತೆ ಇಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ನಸೀಮ್ ಜೈದಿ ಎಲೆಕ್ಷನ್ ಕದನಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ನವದೆಹಲಿ(ಜ.05): ಹೊಸ ವರ್ಷದಲ್ಲಿ ಬರುವ ಮೊದಲ ಬೃಹತ್ ಚುನಾವಣಾ ಸಮರಕ್ಕೆ ಈಗಾಗಲೇ ಮುಹೂರ್ತಫಿಕ್ಸ್ ಆಗಿದ್ದು, ಅದರ ಅಧಿಸೂಚನೆ ಇದೇ 11 ರಂದು ಹೊರಬೀಳಲಿದೆ. ಈ ಚುನಾವಣೆಗಾಗಿ ಈಗಾಗಲೇ ಪಂಚರಾಜ್ಯಗಳಲ್ಲು ಕಸರತ್ತು ಆರಂಭವಾಗಿದ್ದು, ಉತ್ತರಪ್ರದೇಶದಲ್ಲಂತೂ ಕುರುಕ್ಷೇತ್ರವೇ ಸೃಷ್ಟಿಯಾಗಿದೆ. ಇದಕ್ಕೆ ಹಿಂಬು ನೀಡುವಂತೆ ಇಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ನಸೀಮ್ ಜೈದಿ ಎಲೆಕ್ಷನ್ ಕದನಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

2017 ರಲ್ಲಿ ನಡೆಯುವ ದೇಶದ ಅತ್ಯಂತ ದೊಡ್ಡ ಚುನಾವಣಾ ಕದನಕ್ಕೆ ಇಂದು ದಿನಾಂಕ ನಿಗದಿ ಮಾಡಲಾಗಿದೆ. ಇನ್ನೂ ಈ ಸಂಬಂಧ ಇದೇ ಜನವರಿ 11 ರಂದು ಪಂಚ ರಾಜ್ಯಗಳ ಚುನಾವಣೆಯ ಅಧಿಸೂಚನೆ ಹೊರ ಬೀಳಲಿದೆ. ಉತ್ತರ ಪ್ರದೇಶ, ಗೋವಾ, ಉತ್ತರಖಂಡ್, ಪಂಜಾಬ್ ಮತ್ತು ಮಣಿಪುರದಲ್ಲಿ ಚುನಾವಣೆಗಳು ನಿಗದಿಯಾಗಿದ್ದು, ಬೃಹತ್ ಕ್ಷೇತ್ರವಾದ ಉತ್ತರ ಪ್ರದೇಶದಲ್ಲಿ ಒಟ್ಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

1. ಗೋವಾ - 1 ಹಂತದ ಚುನಾವಣೆ

2. ಪಂಜಾಬ್ - 1 ಹಂತದ ಚುನಾವಣೆ

3. ಉತ್ತರಾಖಂಡ್ - 1 ಹಂತದ ಚುನಾವಣೆ

4. ಮಣಿಪುರ - 2 ಹಂತದ ಚುನಾವಣೆ

5. ಉತ್ತರ ಪ್ರದೇಶ - 7 ಹಂತದ ಚುನಾವಣೆ

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ನಸೀಮ್ ಜೈದಿ ಚುನಾವಣಾ ಟೈಮ್ ಟೇಬಲ್ ಬಿಡುಗಡೆ ಮಾಡಿದ್ದು, ಇವತ್ತಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.

ಗೋವಾ - ಫೆಬ್ರವರಿ 4

ಪಂಜಾಬ್ - ಫೆಬ್ರವರಿ 4

ಉತ್ತರಖಂಡ್  - ಫೆಬ್ರವರಿ 15

ಮಣಿಪುರ  - ಮಾರ್ಚ್​ 4 & 8

ಉತ್ತರ ಪ್ರದೇಶ - ಫೆಬ್ರವರಿ 11, 15, 19, 23, 27 ಮಾರ್ಚ್​ 4 & 8

ಪಂಚ ರಾಜ್ಯಗಳಲ್ಲಿ ಒಟ್ಟು 690 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, 16 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇನ್ನೂ ಈ ಚುನಾವಣೆಯು 1 ಲಕ್ಷದ 85 ಸಾವಿರ ಮತಗಟ್ಟೆಗಳಲ್ಲಿ ನಡೆಯಲಿದೆ. ಜನವರಿ 11 ರಂದಿಲೇ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ತುಂಬುವ ಪ್ರಕ್ರಿಯೆ ಆರಂಭವಾಗಲಿದೆ.

ದಾಯಾದಿಗಳ ರಾಜ್ಯದಲ್ಲಿ ಕೆರಳಿದ ಕುತೂಹಲ: ಉತ್ತರ ಪ್ರದೇಶದಲ್ಲಿ 403 ಕ್ಷೇತ್ರದಲ್ಲಿ ಚುನಾವಣೆ

ಪಂಚ ರಾಜ್ಯಗಳಲ್ಲಿ ಉತ್ತರ ಪ್ರದೇಶದ ಚುನಾವಣೆ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿದ್ದು, ಬಿಜೆಪಿ, ಕಾಂಗ್ರೆಸ್,  ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಾರ್ಟಿ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಪ್ರಧಾನಿ ಮೋದಿ, ಅಮಿತ್ ಷಾ ರಿಗೆ ಉತ್ತರ ಪ್ರದೇಶದ ಸಂಪೂರ್ಣ ಜವಾಬ್ದಾರಿ ನೀಡಿದ್ದಾರೆ. ಆದರೆ ಮುಲಾಯಂ ಮತ್ತು ಅಖಿಲೇಶ ಯಾದವ್ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆಯೋ ಅಥವಾ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಆಗುತ್ತದೆಯೋ ಎಂಬುದು ಚುನಾವಣೆಯ ದಿಕ್ಕನ್ನು ಬದಲಿಸಲಿದೆ.

ಮಾರ್ಚ್​ 11 ಕ್ಕೆ  ಪಂಚ ರಾಜ್ಯಗಳ ಎಲೆಕ್ಷನ್ ರಿಸಲ್ಟ್

ನೋಟ್ ಬ್ಯಾನ್ ನಂತರ ನಡೆಯುತ್ತಿರುವ ಅತಿ ದೊಡ್ಡ ಎಲೆಕ್ಷನ್ ಫೈಟ್ ಇದಾಗಿದ್ದು, ಪಂಚರಾಜ್ಯಗಳಿಗೂ ರಾಜಕೀಯ ಅಗ್ನಿ ಪರೀಕ್ಷೆ ಯಾಗಿ ಪರಿಣಮಿಸಲಿದೆ. ಅದ್ರಲ್ಲೂ ಈ ಪಂಚರಾಜ್ಯಗಳ ಚುನಾವಣೆ ವಿಪಕ್ಷಗಳ ಶಕ್ತಿ ಸಾಮರ್ಥ್ಯವನ್ನು ಅನಾವರಣಗೊಳಿಸಲಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?