ಚುನಾಯಿತ ಸರ್ಕಾರಕ್ಕೆ ಅಧಿಕಾರವಿರಬೇಕು: ಸುಪ್ರೀಂ

By Suvarna Web DeskFirst Published Dec 14, 2016, 2:13 PM IST
Highlights

ದೆಹಲಿಯು ಪೂರ್ಣಪ್ರಮಾಣದಲ್ಲಿ ರಾಜ್ಯವಲ್ಲದ ಕಾರಣ ಮಧ್ಯಪ್ರವೇಶ ಅತ್ಯಗತ್ಯ. ಲೆಫ್ಟಿನೆಂಟ್ ಗವರ್ನರ್ ಜಂಗ್ ಅವರಿಗೆ ವಿಶೇಷ ಅಧಿಕಾರವಿದೆ ಎಂಬ ಕೇಂದ್ರ ಸರ್ಕಾರ ಹಾಗೂ ಲೆ. ಗವರ್ನರ್ ಅವರ ವಾದವನ್ನು ಆಗಸ್ಟ್‌'ನಲ್ಲಿ ದೆಹಲಿ ಹೈಕೋರ್ಟ್ ಒಪ್ಪಿತ್ತು.

ನವದೆಹಲಿ(ಡಿ.14): ‘ಚುನಾಯಿತ ಸರ್ಕಾರಕ್ಕೆ ತನ್ನದೇ ಆದ ಕೆಲವು ಅಧಿಕಾರಗಳಿರಬೇಕು. ಇಲ್ಲವಾದರೆ, ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಲು ಆಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ದೆಹಲಿ ಸರ್ಕಾರದ ಪ್ರತಿ ನಿರ್ಧಾರಗಳಲ್ಲೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುತ್ತಿದೆ ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Latest Videos

ದೆಹಲಿಯು ಪೂರ್ಣಪ್ರಮಾಣದಲ್ಲಿ ರಾಜ್ಯವಲ್ಲದ ಕಾರಣ ಮಧ್ಯಪ್ರವೇಶ ಅತ್ಯಗತ್ಯ. ಲೆಫ್ಟಿನೆಂಟ್ ಗವರ್ನರ್ ಜಂಗ್ ಅವರಿಗೆ ವಿಶೇಷ ಅಧಿಕಾರವಿದೆ ಎಂಬ ಕೇಂದ್ರ ಸರ್ಕಾರ ಹಾಗೂ ಲೆ. ಗವರ್ನರ್ ಅವರ ವಾದವನ್ನು ಆಗಸ್ಟ್‌'ನಲ್ಲಿ ದೆಹಲಿ ಹೈಕೋರ್ಟ್ ಒಪ್ಪಿತ್ತು. ಜಂಗ್ ಅವರು ರಾಜಧಾನಿಯ ಆಡಳಿತದ ಮುಖ್ಯಸ್ಥ. ಸರ್ಕಾರದ ಎಲ್ಲ ನಿರ್ಣಯಗಳಿಗೂ ಅವರ ಸಹಿ ಅತ್ಯಗತ್ಯ ಎಂದೂ ಕೋರ್ಟ್ ಹೇಳಿತ್ತು.

ದೆಹಲಿ ಹೈಕೋರ್ಟ್‌'ನ ಈ ಆದೇಶ ಪ್ರಶ್ನಿಸಿ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಮುಂದಿನ ವಿಚಾರಣೆ ಜ.18ರಂದು ನಡೆಯಲಿದೆ.

 

click me!