
ಸಾನ್ ಸಾಲ್ವಡಾರ್[ಸೆ.28]: ಎಲ್ ಸಾಲ್ವಡಾರ್ ದೇಶದಲ್ಲೂ ಸದ್ದು ಮಾಡಿದ ಸುವರ್ಣ ನ್ಯೂಸ್ ಡಾಟ್ ಕಾಂ. ಹೌದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ತಮ್ಮ ಚೊಚ್ಚಲ ಬಾರಿಗೆ ಭಾಷಣಕ್ಕೂ ಮೊದಲು ತೆಗೆದುಕೊಂಡ ಸೆಲ್ಫೀ ಭಾರೀ ವೈರಲ್ ಆಗಿತ್ತು. ಈ ಸುದ್ದಿಯನ್ನು ಸುವರ್ಣ ನ್ಯೂಸ್ ಡಾಟ್ ಕಾಂ ಕೂಡಾ ಪ್ರಕಟಿಸಿತ್ತು.
ವಿಶ್ವಸಂಸ್ಥೆ ಭಾಷಣ ಮುನ್ನ ಸಾಲ್ವಡಾರ್‌ನ ಪ್ರಧಾನಿ ಸೆಲ್ಫೀ ವೈರಲ್!
ಈ ಸುದ್ದಿಯನ್ನು ಅಧ್ಯಕ್ಷ ನಯೀಬ್ ಬುಕೆಲೆ ತಮ್ಮ ಟ್ವಿಟರ್ ಖಾತೆಯಲ್ಲಿ 'ಇದೇನು ತಮಾಷೆ ಅಲ್ಲ' ಎಂದು ಶೇರ್ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಅನ್ನು ಸಾವಿರಾರು ಮಂದಿ ಲೈಕ್ ಹಾಗೂ ರೀಟ್ವಿಟ್ ಮಾಡಿದ್ದಾರೆ. ಅಲ್ಲದೇ ಸ್ಪ್ಯಾನಿಶ್ ಭಾಷೆಯಲ್ಲೇ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕನ್ನಡದ ಕಂಪು ಸಾಗರಗಳಾಚೆಗಿನ ಪುಟ್ಟ ದೇಶ ಎಲ್ ಸಾಲ್ವಡಾರ್ ನಲ್ಲೂ ಹಬ್ಬಿದೆ.
ಎಲ್ಲಿದೆ ಎಲ್ ಸಾಲ್ವಡಾರ್? ಇಲ್ಲಿನ ವಿಶೇಷತೆಗಳೇನು?
ಜ್ವಾಲಾಮುಖಿಗಳ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಎಲ್ ಸಾಲ್ವಡಾರ್ ಮಧ್ಯ ಅಮೆರಿಕಾದ ಒಂದು ಪುಟ್ಟ ದೇಶ. ಪುಟ್ಟ ರಾಷ್ಟ್ರವಾಗಿದ್ದರೂ, ಸುಮಾರು 6.34 ಮಿಲಿಯನ್ ಜನರಿರುವ ಇದು ಮಧ್ಯ ಅಮೆರಿಕಾದ ಅತಿಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದೆ. 21,041 ಸ್ಕ್ವೇರ್ ಕಿ. ಮೀ ವಿಸ್ತೀರ್ಣ ಹೊಂದಿರುವ ಈ ಚಿಕ್ಕ ದೇಶದ ರಾಷ್ಟ್ರೀಯ ಭಾಷೆ ಸ್ಪ್ಯಾನಿಶ್.
ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ 2/3 ರಷ್ಟು ಜನರು ಕೃಷಿಕರು. ಮುಸುಕಿನ ಜೋಳ, ಕಬ್ಬು, ಭತ್ತ ಹಾಗೂ ಗೋಧಿ ಇಲ್ಲಿನ ಆಹಾರ ಬೆಳೆಗಳಾದರೆ, ಕಾಫಿ ವಾಣಿಜ್ಯ ಬೆಳೆ. ಇನ್ನು ಇಲ್ಲಿನ ಅತಿ ದೊಡ್ಡ ನಗರವಾಗಿರುವ ಸಾನ್ ಸಾಲ್ವಡಾರ್ ಈ ದೇಶದ ರಾಜಧಾನಿ.
"
ಸದ್ಯ ಅಧ್ಯಕ್ಷ ನಯೀಬ್ ಬುಕೆಲೆಯ ಒಂದು ಸೆಲ್ಫೀಯಿಂದಾಗಿ ಎಲ್ ಸಾಲ್ವಡಾರ್ ಎಂಬ ಪುಟ್ಟ ದೇಶ ಇಡೀ ವಿಶ್ವದ ಗಮನ ಸೆಳೆದಿದೆ. ಹೀಗಿರುವಾಗ ಈ ಪುಟ್ಟ ದೇಶದಲ್ಲಿ ಕನ್ನಡದ ಕಂಪೂ ಹಬ್ಬಿದೆ ಎಂಬುವುದು ಮತ್ತೊಂದು ಹೆಮ್ಮೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.