ಮೊಟ್ಟೆ ಪ್ರಿಯರಿಗೆ ಒಂದು ಸಿಹಿ ಸುದ್ದಿ..!

By Suvarna Web DeskFirst Published Dec 17, 2017, 12:08 PM IST
Highlights

ಕಳೆದ ಕೆಲ ತಿಂಗಳಿನಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದ್ದ ಕೋಳಿ ಮೊಟ್ಟೆ ದರ ದೇಶದ ವಿವಿಧ ಮಾರುಕಟ್ಟೆಗಳಲ್ಲಿ ಶೇ.20ರಿಂದ 25ರಷ್ಟು ಕುಸಿದಿದೆ.

ಬೆಂಗಳೂರು (ಡಿ.17): ಕಳೆದ ಕೆಲ ತಿಂಗಳಿನಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿದ್ದ ಕೋಳಿ ಮೊಟ್ಟೆ ದರ ದೇಶದ ವಿವಿಧ ಮಾರುಕಟ್ಟೆಗಳಲ್ಲಿ ಶೇ.20ರಿಂದ 25ರಷ್ಟು ಕುಸಿದಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಳದಿಂದ ಗ್ರಾಹಕರು ಕಡಿಮೆ ಹಣಕ್ಕೆ ಅಧಿಕ ಪೌಷ್ಟಿಕಾಂಶವುಳ್ಳ ಮೊಟ್ಟೆ ಖರೀದಿಗೆ ಒಲವು ತೋರಿದ್ದರು. ನಂತರ ಮೊಟ್ಟೆ ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರು ಖರೀದಿ ಕಡಿಮೆ ಮಾಡಿದ್ದರು.

ಜತೆಗೆ ಧನುರ್ಮಾಸವೂ ಬಂದಿದ್ದರಿಂದ ಮೊಟ್ಟೆ ಮಾರಾಟ ಕುಸಿದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮೊಟ್ಟೆ ಸಹಕಾರ ಸಮಿತಿ (ಎನ್ಇಸಿಸಿ) ದರ ಇಳಿಸಿದೆ.

ಎನ್ಇಸಿಸಿ ಅಂಕಿ ಅಂಶದ ಪ್ರಕಾರ, ನವೆಂಬರ್’ನಲ್ಲಿ ನೂರು ಮೊಟ್ಟೆಗಳಿಗೆ ಬೆಂಗಳೂರಿನಲ್ಲಿ 500 ರು. ಇದ್ದ ಬೆಲೆ ಕಳೆದ ಹದಿನೈದು ದಿನಗಳಲ್ಲಿ 435ರು.ಗೆ ಇಳಿದಿದೆ. ಈಗ ಮತ್ತೆ ಶೇ.20 ರಿಂದ 25ರಷ್ಟು ಕಡಿಮೆಯಾಗಿದ್ದು, ಸುಮಾರು 395 ರು.ಗೆ ಕುಸಿದಿದೆ ಎಂದು ಎನ್’ಇಸಿಸಿ ಬೆಂಗಳೂರು ವಲಯದ ಅಧ್ಯಕ್ಷ ಜಿ.ಆರ್.ಸಾಯಿನಾಥ್ ತಿಳಿಸಿದರು.

click me!