
ನವದೆಹಲಿ: ಚುನಾವಣಾ ಆಯೋಗದ ಬಗ್ಗೆ ಅಪಪ್ರಚಾರ ನಡೆಸುವ, ಆಧಾರ ರಹಿತ ಆಪಾದನೆ ಮಾಡುವವರ ವಿರುದ್ಧ ‘ನಿಂದನಾ ಪ್ರಕ್ರಿಯೆ' ಆರಂಭಿಸುವ ಅಧಿಕಾರವನ್ನು ತನಗೆ ನೀಡಬೇಕು ಎಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಬಗ್ಗೆ ನ್ಯಾಯಾಂಗ ನಿಂದನೆ ಕಾಯ್ದೆ-1971ಕ್ಕೆ ತಿದ್ದುಪಡಿ ಮಾಡಬೇಕು ಎಂದು ಆಯೋಗವು ಕೋರಿದೆ. ಒಂದು ವೇಳೆ ತಿದ್ದುಪಡಿಯಾದರೆ, ತನ್ನ ವಿರುದ್ಧ ಆಧಾರರಹಿತ ಆರೋಪ ಮಾಡುವವರ ವಿರುದ್ಧ ನೇರವಾಗಿ ನಿಂದನಾ ಮೊಕದ್ದಮೆ ಹೂಡಿ ವಿಚಾರಣೆ ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರ ದೊರಕಲಿದೆ.
ಈಗಾಗಲೇ ಪಾಕಿಸ್ತಾನ ಚುನಾವಣಾ ಆಯೋಗಕ್ಕೆ ಇಂಥ ಅಧಿಕಾರವಿದೆ. ತನ್ನ ವಿರುದ್ಧ ಆರೋಪ ಮಾಡಿದ ಪಾಕ್ ವಿಪಕ್ಷ ನಾಯಕ ಇಮ್ರಾನ್ ಖಾನ್ ವಿರುದ್ಧ ಆಯೋಗ ನಿಂದನಾ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದೆ.
ಇತ್ತೀಚೆಗೆ ಆಯೋಗದ ನಿಷ್ಪಕ್ಷತೆಯನ್ನು ಪ್ರಶ್ನಿಸುವ ಪ್ರಸಂಗ ನಡೆದಿದ್ದವು ಹಾಗೂ ಆಯೋಗ ಮತಯಂತ್ರ ತಿರುಚುತ್ತಿದೆ ಎಂದು ಹಲವು ಪಕ್ಷಗಳು ಆಪಾದಿಸಿದ್ದವು. ಈ ಹಿನ್ನೆಲೆಯಲ್ಲಿ ಇಂಥ ಅಧಿಕಾರವನ್ನು ತನಗೆ ನೀಡುವಂತೆ ಆಯೋಗವು ಸರ್ಕಾರದ ಮೊರೆ ಹೋಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.