
ಚಿತ್ರದುರ್ಗ (ಏ.02): ಬೆಳ್ಳಂಬೆಳಗ್ಗೆ ಕೆಲ ಜಿಲ್ಲೆಗಳಲ್ಲಿ ಭೂಕಂಪನ ಸಂಭವಿಸಿದೆ. ಚಿತ್ರದುರ್ಗದ ಹಿರಿಯೂರು, ಹೊಸದುರ್ಗ ತಾಲೂಕಿನ 30 ಕಿ.ಮೀ. ವ್ಯಾಪ್ತಿಯಲ್ಲಿ ಲಘು ಭೂಕಂಪಿಸಿದ ಅನುಭವವಾಗಿದೆ. ಬೆಳಗ್ಗೆ 6:50ರ ವೇಳೆ 2 ರಿಂದ 3 ಸೆಕೆಂಡ್ ಕಾಲ ಕಂಪಿಸಿದೆ. ಕಂಚಿಪುರ ಗ್ರಾಮದಲ್ಲಿ ಮನೆಗಳಲ್ಲಿದ್ದ ಪಾತ್ರೆಗಳು, ವಸ್ತುಗಳು ಬೀಳುತ್ತಿದ್ದಂತೆ ಜನ ಆತಂಕಗೊಂಡು ಮನೆಯಿಂದ ಆಚೆ ಬಂದಿದ್ದಾರೆ. ಭೂಕಂಪನ ಸದ್ದು ಕೇಳಿ ಹೊರಬರುವಾಗ ಕುಸಿದು ಬಿದ್ದು ವೃದ್ಧೆ ರಾಮಕ್ಕ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹಲವೆಡೆ ಲಘು ಭೂಕಂಪನದ ಅನುಭವಾಗಿದೆ. ಹುಳಿಯಾರು ಹೋಬಳಿಯ ಕೆಲ ಗ್ರಾಮಗಳಲ್ಲಿ ಭೂಮಿ ನಡುಗಿದೆ. ಹುಳಿಯಾರು, ಗಾಣದಾಳು, ಯಗಚಿಹಳ್ಳಿ, ದಸೂಡಿ, ಕೆಂಕೆರೆ ಗ್ರಾಮಗಳ ಸುತ್ತಮುತ್ತ ಬೆಳಗ್ಗೆ 6.40ರ ಸುಮಾರಿನಲ್ಲಿ ಭೂಮಿ ಕಂಪಿಸಿದೆ ಭಯದಿಂದ ಮನೆಗಳಿಂದ ಗ್ರಾಮಸ್ಥರು ಹೊರ ಓಡಿ ಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ 2.9ರಷ್ಟು ಕಂಪನದ ತೀವ್ರತೆ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.