
ಟೋಕಿಯೋ(ನ. 22): ಜಪಾನ್ ದೇಶದ ಈಶಾನ್ಯಭಾಗದಲ್ಲಿ ಮಂಗಳವಾರ 6.9 ತೀವ್ರತೆಯ ಭೂಕಂಪ ಸಂಭವಿಸಿದೆ. ಕಂಪನದಿಂದಾಗಿ ಪುಟ್ಟ ಸುನಾಮಿಯೂ ಅಪ್ಪಳಿಸಿದೆ. ಆದರೆ, ಕೆಲ ಕಡೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಹಾನಿಯಾದ ಬಗ್ಗೆ ವರದಿಗಳು ಬಂದಿಲ್ಲ.
ಫುಕುಶಿಮಾ ನಗರದಾಚೆಯ ಸಾಗರದಲ್ಲಿ 11.3 ಕಿಮೀ ಆಳದಲ್ಲಿ ಕಂಪನದ ಕೇಂದ್ರವಿತ್ತು. ಭೂಕಂಪದ ಬಳಿಕ ಅಧಿಕಾರಿಗಳು 3 ಮೀಟರ್ ಎತ್ತರದ ಸುನಾಮಿ ಅಲೆ ಏಳಬಹುದೆಂದು ಮೊದಲೇ ಎಚ್ಚರಿಸಿದ್ದರು. ಆದರೆ, ಈಶಾನ್ಯಭಾಗದ ತೀರದಲ್ಲಿ ಅಪ್ಪಳಿಸಿದ ಸುನಾಮಿ ಕೆಲ ಕಡೆ 1.4 ಮೀ.(4.6 ಅಡಿ) ಎತ್ತರ ಇತ್ತಾದರೂ ಸರಾಸರಿಯಾಗಿ 1 ಮೀಟರ್ ಎತ್ತರವಿತ್ತೆನ್ನಲಾಗಿದೆ.
ಪರಮಾಣು ಘಟಕಕ್ಕೆ ಧಕ್ಕೆ?
ಸಾಗರ ತೀರದ ಸಮೀಪದಲ್ಲೇ ಇರುವ ಫುಕುಶಿಮಾ ಪರಮಾಣು ವಿದ್ಯುತ್ ಘಟಕದ ಮೇಲೆ ಸುನಾಮಿ ಅಲೆ ಅಪ್ಪಳಿಸಿತು ಎಂಬ ವರದಿ ಬಂದಿದೆ. ಆದರೆ, ಘಟಕದ ಕಲುಷಿತ ನೀರು ಸುನಾಮಿ ಅಲೆಯೊಂದಿಗೆ ಸಾಗರಕ್ಕೆ ಸೇರಿಕೊಂಡಿರುವುದು ಆತಂಕಕಾರಿ ಎನಿಸಿದೆ ಎಂದು ಜಪಾನ್ ಅಧಿಕಾರಿಗಳ ಹೇಳಿದ್ದಾರೆ.
ಜಪಾನ್ ದೇಶದಲ್ಲಿ ಭೂಕಂಪಗಳು ಸಂಭವಿಸುವುದು ಸಾಮಾನ್ಯ ವಿಷಯ. ಆದರೆ, 2011ರಲ್ಲಿ ಇಲ್ಲಿ ಅಪ್ಪಳಿಸಿದ ಭೀಕರ ಸುನಾಮಿಗೆ 18 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.