ಸ್ಟೀಲ್ ಫ್ಲೈಓವರ್'ಗೆ ಬೇಕಂತೆ 1800 ಕೋಟಿ ರೂ.!: ಕೋಟಿ ಕೋಟಿ ಹಣ ಸಂಗ್ರಹಕ್ಕೆ ಕೆರೆಗಳು ಬಲಿ!

Published : Nov 22, 2016, 02:35 AM ISTUpdated : Apr 11, 2018, 12:59 PM IST
ಸ್ಟೀಲ್ ಫ್ಲೈಓವರ್'ಗೆ ಬೇಕಂತೆ 1800 ಕೋಟಿ ರೂ.!: ಕೋಟಿ ಕೋಟಿ ಹಣ ಸಂಗ್ರಹಕ್ಕೆ ಕೆರೆಗಳು ಬಲಿ!

ಸಾರಾಂಶ

ಈಗಾಗಲೇ ಬಿಡಿಎ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ನಡುವೆ  ಬಹುಕೋಟಿ ವೆಚ್ಚದ ಫ್ಲೈಓವರ್ ನಿರ್ಮಾಣದ  ಹಠಕ್ಕೆ ಬಿದ್ದಿದೆ. ಬಿಡಿಎ ತನ್ನ ಹಠಮಾರಿತನ ಸಾಧಿಸಲು ಇದೀಗ ಬೆಂಗಳೂರಿಗರ ಜೀವಜಲದ ನಾಶಕ್ಕೆ ಮುಂದಾಗಿದೆ. ಪ್ಲೈಓವರ್ ನಿರ್ಮಾಣಕ್ಕೆ ಬೇಕಾಗಿರುವ 1800 ಕೋಟಿ ಹಣ ಸಂಗ್ರಹಿಸಲು, ನಗರದಲ್ಲಿರುವ 60ಕೆರೆಗಳನ್ನು ಬಲಿ ಕೊಡಲು ಮುಂದಾಗಿದೆ. ಈ ರಾಜ್ಯ ಸರ್ಕಾರಕ್ಕೆ  ಸ್ಟ್ಲೀ ಪ್ಲೈಓವರ್ ಮೇಲೆ ಅಷ್ಟೊಂದು ಪ್ರೀತಿ ಯಾಕೋ ಗೊತ್ತಾಗುತ್ತಿಲ್ಲ. ಪ್ರಯೋಜನಕ್ಕಿಂತ, ಅನಾನುಕೂಲಗಳೇ ಹೆಚ್ಚಾಗಿರುವ ಈ  ಸ್ಟ್ರೀಲ್ ಫ್ಲೈಓವರ್ ಬೇಡವೇ ಬೇಡ ಅಂತಾ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಆದರೆ ಪ್ರತಿಷ್ಠಿಗೆ ಬಿದ್ದಿರುವ ಸರ್ಕಾರ,  ಸ್ಟೀಲ್ ಪ್ಲೈಓವರ್  ನಿರ್ಮಾಣಕ್ಕಾಗಿ ಬೆಂಗಳೂರಿಗ ಜೀವಜಲದ ಮೂಲಗಳಾಗಿರುವ ಕೆರೆಗಳನ್ನು ಬಲಿ ಕೊಡಲು ಹೊರಟಿದೆ.

ಈಗಾಗಲೇ ಬಿಡಿಎ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ನಡುವೆ  ಬಹುಕೋಟಿ ವೆಚ್ಚದ ಫ್ಲೈಓವರ್ ನಿರ್ಮಾಣದ  ಹಠಕ್ಕೆ ಬಿದ್ದಿದೆ. ಬಿಡಿಎ ತನ್ನ ಹಠಮಾರಿತನ ಸಾಧಿಸಲು ಇದೀಗ ಬೆಂಗಳೂರಿಗರ ಜೀವಜಲದ ನಾಶಕ್ಕೆ ಮುಂದಾಗಿದೆ. ಪ್ಲೈಓವರ್ ನಿರ್ಮಾಣಕ್ಕೆ ಬೇಕಾಗಿರುವ 1800 ಕೋಟಿ ಹಣ ಸಂಗ್ರಹಿಸಲು, ನಗರದಲ್ಲಿರುವ 60ಕೆರೆಗಳನ್ನು ಬಲಿ ಕೊಡಲು ಮುಂದಾಗಿದೆ.

ಈ ರಾಜ್ಯ ಸರ್ಕಾರಕ್ಕೆ  ಸ್ಟ್ಲೀ ಪ್ಲೈಓವರ್ ಮೇಲೆ ಅಷ್ಟೊಂದು ಪ್ರೀತಿ ಯಾಕೋ ಗೊತ್ತಾಗುತ್ತಿಲ್ಲ. ಪ್ರಯೋಜನಕ್ಕಿಂತ, ಅನಾನುಕೂಲಗಳೇ ಹೆಚ್ಚಾಗಿರುವ ಈ  ಸ್ಟ್ರೀಲ್ ಫ್ಲೈಓವರ್ ಬೇಡವೇ ಬೇಡ ಅಂತಾ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಆದರೆ ಪ್ರತಿಷ್ಠಿಗೆ ಬಿದ್ದಿರುವ ಸರ್ಕಾರ,  ಸ್ಟೀಲ್ ಪ್ಲೈಓವರ್  ನಿರ್ಮಾಣಕ್ಕಾಗಿ ಬೆಂಗಳೂರಿಗ ಜೀವಜಲದ ಮೂಲಗಳಾಗಿರುವ ಕೆರೆಗಳನ್ನು ಬಲಿ ಕೊಡಲು ಹೊರಟಿದೆ.

ಮೊದಲೇ ಆರ್ಥಿಕ ಬಿಗ್ಗಟ್ಟು ಎದುರಿಸುತ್ತಿರುವ ಬಿಡಿಎಗೆ 1800 ಕೋಟಿ ಎಲ್ಲಿಂದ ಬರಬೇಕು ಹೇಳಿ. ಆದರೆ ಸ್ಟ್ಲೀ ಪ್ಲೈಓವರ್ ನಿರ್ಮಾಣಕ್ಕೆ 1800 ಕೋಟಿ ಹಣ ಸಂಗ್ರಹಿಸಲು ಬೆಂಗಳೂರಿನ ಕೆರೆಗಳನ್ನು ಬಲಿಕೊಡ್ತಿದೆ.

ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕಾಗಿ ಬೆಂಗಳೂರಿಗರ ಹಿತಾಶಕ್ತಿಯನ್ನೇ ಬಲಿಕೊಡಲು ಸರ್ಕಾರ ಮುಂದಾಗಿದೆ. ಇದ್ರ ಮೊದಲ ಹೆಜ್ಜೆಯಾಗಿ ಬಿಡಿಎ ಕೆರೆಗಳ ಅಭಿವೃದ್ಧಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ತನ್ನ ವ್ಯಾಪ್ತಿಗೆ ಬರುವ 90ಕೆರೆಗಳ ಪೈಕಿ  60 ಕೆರೆಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಿದೆ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಬೃಹತ್ ಯೋಜನೆಗಳನ್ನು ಕೈಗೊಳ್ಳಲು ಕಷ್ಟಸಾಧ್ಯವಾಗಿರುವಾಗ ಕೆರೆಗಳ ಅಭಿವೃದ್ಧಿ ಸುತಾರಾಂ ಸಾಧ್ಯವೇ ಇಲ್ಲ ಅಂತಾ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಧಿ ಎನ್.ನರಸಿಂಹಮೂರ್ತಿ  ಇತ್ತೀಚೆಗಷ್ಟೆ ಆದೇಶ ಹೊರಡಿಸಿದ್ದರು.ಈ ಆದೇಶವನ್ನು ಕಳೆದ 17 ರಂದು ರಾಜ್ಯ ಸರ್ಕಾರ ತನ್ನ ಅಧಿಕೃತ ರಾಜ್ಯಪತ್ರದಲ್ಲೂ ಹೊರಡಿಸಿದೆ.  ಈ ಆದೇಶವುಳ್ಳ ಕರ್ನಾಟಕ ರಾಜ್ಯಪತ್ರದ ಪ್ರತಿಗಳು ಸುವರ್ಣನ್ಯೂಸ್​ಗೆ ಎಕ್ಸ್​ಕ್ಲೂಸಿವ್ ಆಗಿ ಸಿಕ್ಕಿದೆ.

ಬೆಳ್ಳಂದೂರು ಕೆರೆ

ವರ್ತೂರು ಕೆರೆ

ಚುಂಚನಘಟ್ಟ ಕೆರೆ

ಚಿಕ್ಕಬೇಗೂರು ಕೆರೆ

ಹುಳಿಮಾವು ಕೆರೆ

ಕೊತ್ತನೂರು ಕೆರೆ

ಲಕ್ಷ್ಮೀಪುರ ಕೆರೆ

ಸೂಲಿಕೆರೆ

ತಲಘಟ್ಟಪುರ ಕೆರೆ

ಕೋಣನಕುಂಟೆ ಕೆರೆ

ಸೇರಿದಂತೆ ಒಟ್ಟು 60 ಕೆರೆಗಳನ್ನು ಬಲಿಕೊಡಲು ಮುಂದಾಗಿದೆ. ನೊರೆ ಕಕ್ಕುತ್ತಿರುವ ಬೆಳ್ಳಂದೂರು , ವರ್ತೂರು ಕೆರೆಗಳ ನಿರ್ವಹಣೆಯ ಜವಾಬ್ದಾರಿಯಿಂದಲೂ ಬಿಡಿಎ ನುಣುಚಿಕೊಂಡಿದೆ. ಸ್ಟೀಲ್ ಫ್ಲೈಓವರ್‌ಗೆ 1800 ಕೋಟಿ ಖರ್ಚು ಮಾಡುವುದಲ್ಲದೇ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೂ 812 ಮರಗಳಿಗೂ ಕೊಡಲಿ ಹಾಕಲು ಬಿಡಿಎ ಮುಂದಾಗಿದೆ. ಇದಕ್ಕೆ ನಮ್ಮ ಬೆಂಗಳೂರು ಫೌಂಡೇಷನ್, ಸಿಟಿಜನ್ ಫಾರ್ ಬೆಂಗಳೂರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಬಲ ವಿರೋಧವ್ಯಕ್ತಪಡಿಸಿ ಅಕ್ಟೋಬರ್ 12 ರಂದು ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೂ ಬೃಹತ್ ಮಾನವ ಸರಪಳಿ ಮೂಲಕ ಪ್ರತಿಭಟನೆ ನಡೆಸಿದ್ದವು. ಇನ್ನೂ ಈ ಯೋಜನೆ ವಿರೋಧಿಸಿ ಸಿಟಿಜನ್ ಫಾರ್ ಬೆಂಗಳೂರು ಸಂಘಟನೆ, ರಾಷ್ಟ್ರೀಯ ಹಸಿರು ಪೀಠಕ್ಕೆ ಯೋಜನೆಗೆ ತಡೆ ಕೋರಿ ಅರ್ಜಿ ಸಲ್ಲಿಸಿತ್ತು. ಕಳೆದ ತಿಂಗಳು ಅರ್ಜಿ ವಿಚಾರಣೆ ನಡೆಸಿದ ಹಸಿರು ಪೀಠ ನಾಲ್ಕು ವಾರಗಳ ತಡೆ ನೀಡಿದೆ. ಇದೇ 25 ರಂದು ತಡೆ ಕೋರಿದ್ದ ಅರ್ಜಿ ವಿಚಾರಣೆಗೆ ಬರಲಿದೆ.

ಅದೇನೆ ಇರಲಿ, ಒಂದ್ ಕಡೆ ಸ್ಟೀಲ್ ಫ್ಲೈಓವರ್ ನಂಥಾ ದುಬಾರಿ ಯೋಜನೆಯ ಹೊಣೆ ಕೊಟ್ಟು ಬಿಡಿಎಯನ್ನು ನಿಷ್ಕ್ರಿಯ ಮಾಡ್ತಿದೆ. ಇತ್ತ ಬಿಡಿಎ ಇದೇ ನೆಪದಲ್ಲಿ ನಗರದ ಅಂತರ್ಜಲ ನಾಡಿಯಾಗಿರುವ ಕೆರೆಗಳನ್ನೇ ಸ್ಟೀಲ್​ಫ್ಲೈಓವರ್​ಗೆ ಬಲಿ ಕೊಡ್ತಿದೆ. ಇದು ಎಂಥಾ ವಿಪರ್ಯಾಸ ಅಲ್ವಾ..?

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗರ್ಭಧರಿಸಿ 9 ತಿಂಗಳು ಪೂರೈಸಿದ ಹಸುವಿಗೆ ಸೀಮಂತ ಮಾಡಿದ ಮಂಡ್ಯ ರೈತ
ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌