
ಬೆಂಗಳೂರು : ದುನಿಯಾ ವಿಜಯ್ ಪೊಲೀಸರ ವಶದಲ್ಲಿದ್ದ ವೇಳೆ ಇತ್ತ ಅವರ ಮೊದಲ ಮತ್ತು ಎರಡನೇ ಪತ್ನಿ ನಡುವೆ ಗಲಾಟೆ ನಡೆದು ಪ್ರಕರಣ ಗಿರಿನಗರ ಠಾಣೆ ಮೆಟ್ಟಿಲೇರಿದೆ. ಎರಡನೇ ಪತ್ನಿ ಕೀರ್ತಿ ತನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮೊದಲ ಪತ್ನಿ ನಾಗರತ್ನ ಗಿರಿನಗರ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಅನ್ವಯ ಕೀರ್ತಿ ವಿರುದ್ಧ ಐಪಿಸಿ ಕಲಂ 341, 323, 504, 506, 354 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ಖುದ್ದು ಕೀರ್ತಿ ಗೌಡ ಅವರೇ ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ.
ಮಕ್ಕಳ ಬಗ್ಗೆ ವಿಚಾರಿಸಲು ಹೋಗಿದ್ದ ನಾಗರತ್ನ: ದುನಿಯಾ ವಿಜಯ್ ಪೊಲೀಸರ ವಶದಲ್ಲಿದ್ದ ವೇಳೆ ಮಕ್ಕಳಿಗೆ ಏನಾದರೂ ತೊಂದರೆ ಆಗಿರಬಹುದು ಎನ್ನುವ ಭಯದಿಂದ ಗಿರಿನಗರದ ಮನೆಗೆ ಹೋಗಿದ್ದೆ. ಕೀರ್ತಿ ಮತ್ತು ಇಬ್ಬರು ಹುಡುಗರು ನನ್ನನ್ನು ಅವರ ಮನೆಯೊಳಗೆ ಬಿಡಲಿಲ್ಲ. ಮಕ್ಕಳು ಮಾತನಾಡುವುದಿಲ್ಲ ಎಂದು ಇಲ್ಲಿಂದ ಹೋಗು ಎಂದು ಅವಾಚ್ಯ ಶಬ್ದದಿಂದ ನಿಂದಿಸಿದರು. ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದರು. ಕೀರ್ತಿ ನನ್ನನ್ನು ತಳ್ಳಿದಾಗ ಪ್ರಾಣ ರಕ್ಷಣೆಗಾಗಿ ಆಕೆಗೆ ನಾನು ಕೂಡ ಹೊಡೆದಿದ್ದೇನೆ.
ಹೀಗಾಗಿ ನನ್ನ ಹಾಗೂ ಮಕ್ಕಳ ಪ್ರಾಣಕ್ಕೆ ಏನೇ ತೊಂದರೆ ಆದರೂ ಕೀರ್ತಿ ಮತ್ತು ಅವರ ಕುಟುಂಬದವರೇ ಕಾರಣ ಎಂದು ನಾಗರತ್ನ ದೂರು ನೀಡಿದ್ದಾರೆ. ದುನಿಯಾ ವಿಜಿಗೂ ಕೀರ್ತಿಗೂ ನಡುವೆ ಅನೈತಿಕ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ದೂರಿನಲ್ಲಿ ನಾಗರತ್ನ ಮನವಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.