
ನವದೆಹಲಿ(ಸೆ.24): ಸೈಲ್ಲಿಂಗ್ ರೇಸ್ ನಿಂದ ಗಾಯಗೊಂಡು ಆಸ್ಟ್ರೇಲಿಯಾ ಹತ್ತಿರ ಹಿಂದೂ ಮಹಾಸಾಗರದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಭಾರತೀಯ ನೌಕ ಅಧಿಕಾರಿಯನ್ನು ಫ್ರೆಂಚ್ ಹಡಗೊಂದು ರಕ್ಷಿಸಿದೆ 16 ತಾಸುಗಳಲ್ಲೇ ರಕ್ಷಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಭಾರತೀಯ ನೌಕಾಧಿಕಾರಿ ಅಭಿಲಾಷ್ ಟೊಮಿ ಸಂಕಷ್ಟಕ್ಕೆ ಸಿಲುಕಿದ ಅಧಿಕಾರಿ ಎನ್ನಲಾಗಿದೆ. ಇವರು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಪಾಲ್ಗೊಂಡಿದ್ದಾಗ ಗಾಯಗೊಂಡು, ಮಹಾಸಾಗರಕ್ಕೆ ಬಿದಿದ್ದಾರೆ.
ತಕ್ಷಣ ಫ್ರೆಂಚ್ ಮೂಲದ ಹಡಗೊಂದು ಕಾರ್ಯಾಚರಣೆ ನಡೆಸಿ ಅವರನ್ನು ಘಟನೆ ನಡೆದ 16 ತಾಸುಗಳಲ್ಲೇ ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.