ಕುಡಿದ ಅಮಲಿನಲ್ಲಿ ಮನೆಗೇ ಕಾರು ಗುದ್ದಿದ ಡ್ರೈವರ್

Published : Oct 27, 2016, 04:01 AM ISTUpdated : Apr 11, 2018, 01:08 PM IST
ಕುಡಿದ ಅಮಲಿನಲ್ಲಿ ಮನೆಗೇ ಕಾರು ಗುದ್ದಿದ ಡ್ರೈವರ್

ಸಾರಾಂಶ

ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿ ಮನೆಗೆ ಗುದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹನುಮಂತನಗರದ ಟಿ.ಪಿ.ಕೈಲಾಸಂ 6ನೇ ಕ್ರಾಸ್ ನಲ್ಲಿ ರಾತ್ರಿ ಯುವಕರ ಗುಂಪೊಂದು ಕುಡಿದು ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದಾರೆ. ಮೊದಲೇ ಕುಡಿದಿದ್ದರಿಂದ ಕಾರಿನ ನಿಯಂತ್ರಣ ಕಳೆದುಕೊಂಡ ಡ್ರೈವರ್ ಮೊದಲು ಮರಕ್ಕೆ ಗುದ್ದಿದ್ದಾನೆ. ಬಳಿಕ ಕಾರು ಗುರು ರಾವ್ ಎಂಬುವರ ಮನೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡ್ರೈವರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಪ್ರಾಣಪಾಯದಿಂದ ಪರಾಗಿದ್ದಾನೆ. ಘಟನೆ ಬಳಿಕ ಕಾರ್ ಬಿಟ್ಟು ಡ್ರೈವರ್ ಪರಾರಿಯಾಗಿದ್ದಾನೆ. ಕುಡಿದು ಅತೀ ವೇಗವಾಗಿ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು(ಅ.27): ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿ ಮನೆಗೆ ಗುದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹನುಮಂತನಗರದ ಟಿ.ಪಿ.ಕೈಲಾಸಂ 6ನೇ ಕ್ರಾಸ್ ನಲ್ಲಿ ರಾತ್ರಿ ಯುವಕರ ಗುಂಪೊಂದು ಕುಡಿದು ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದಾರೆ.

ಮೊದಲೇ ಕುಡಿದಿದ್ದರಿಂದ ಕಾರಿನ ನಿಯಂತ್ರಣ ಕಳೆದುಕೊಂಡ ಡ್ರೈವರ್ ಮೊದಲು ಮರಕ್ಕೆ ಗುದ್ದಿದ್ದಾನೆ. ಬಳಿಕ ಕಾರು ಗುರು ರಾವ್ ಎಂಬುವರ ಮನೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡ್ರೈವರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಪ್ರಾಣಪಾಯದಿಂದ ಪರಾಗಿದ್ದಾನೆ. ಘಟನೆ ಬಳಿಕ ಕಾರ್ ಬಿಟ್ಟು ಡ್ರೈವರ್ ಪರಾರಿಯಾಗಿದ್ದಾನೆ. ಕುಡಿದು ಅತೀ ವೇಗವಾಗಿ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಬಸವಗುಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಕಾರಿನಲ್ಲಿದ್ದ ಯುವಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
Tumkur: ಪ್ರೀತಿಯಿಂದ ಸಾಕಿದ ಮಗ, ಒಡಹುಟ್ಟಿದ ತಂಗಿಯೇ ಹಂತಕರು; ಚಿಕ್ಕನಾಯಕನಹಳ್ಳಿಯ ಜಯಲಕ್ಷ್ಮಿ ಸಾವಿನ ರಹಸ್ಯ ಬಯಲು!