ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸ್ವೀಟ್ ಬಾಕ್ಸ್’ನಲ್ಲಿ ಒಂದು ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ

By Suvarna Web DeskFirst Published Jan 6, 2018, 9:55 AM IST
Highlights

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಹಾಗೂ ಡ್ರಗ್ಸ್ ಸಾಗಾಣಿಕೆ ಜಾಲದ ವಿರುದ್ಧ ಸುಂಕ (ಕಸ್ಟಮ್ಸ್) ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ಹೊಸ ವರ್ಷಾರಂಭದಲ್ಲಿ ವಿದೇಶದಿಂದ ಕಳ್ಳ ಹಾದಿಯಲ್ಲಿ ನುಸುಳುತ್ತಿದ್ದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು (ಜ.06): ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಹಾಗೂ ಡ್ರಗ್ಸ್ ಸಾಗಾಣಿಕೆ ಜಾಲದ ವಿರುದ್ಧ ಸುಂಕ (ಕಸ್ಟಮ್ಸ್) ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ಹೊಸ ವರ್ಷಾರಂಭದಲ್ಲಿ ವಿದೇಶದಿಂದ ಕಳ್ಳ ಹಾದಿಯಲ್ಲಿ ನುಸುಳುತ್ತಿದ್ದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ನಡೆದಿರುವ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ, 1 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನಾಭರಣ ಹಾಗೂ ಕಾಡು ಪ್ರಾಣಿಗಳ ದಂತಗಳು ವಶವಾಗಿವೆ. ಕಳ್ಳ ಸಾಗಾಣಿಕೆ ಮಾಡುತ್ತಿದ್ದ ದಂಪತಿ ಸೇರಿದಂತೆ ನಾಲ್ವರು ಬಲೆಗೆ ಬಿದ್ದಿದ್ದಾರೆ.

ಸಿಹಿ ಬಾಕ್ಸ್  ಕೋಟಿ ಮೌಲ್ಯದ ಡ್ರಗ್ಸ್: ವಿದೇಶದಿಂದ ಸ್ವೀಟ್ಸ್ ಬಾಕ್ಸ್‌ನಲ್ಲಿ ಸಾಗಾಣಿಕೆಯಾಗುತ್ತಿದ್ದ 1 ಕೋಟಿ ರು. ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜ.2ರಂದು ಮಲೇಶಿಯಾದ ಕೌಲಾಲಂಪುರದಿಂದ ‘ಶ್ರೀ ಮಿಠಾಯಿ’ ಹೆಸರಿನ ಸ್ವೀಟ್ಸ್ ಬಾಕ್ಸ್‌ನಲ್ಲಿ ಕೊರಿಯರ್‌ನಲ್ಲಿ ಕೆಟಮಿನ್ ಡ್ರಗ್ಸ್ ಪತ್ತೆಯಾಗಿದ್ದು,ಕಾರ್ಗೋ ವಿಭಾಗದಲ್ಲಿ ಕೊರಿಯರ್ ವಸ್ತುಗಳನ್ನು ಪರಿಶೀಲಿಸುತ್ತಿದ್ದಾಗ ಈ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರಕುಗಳ ತಪಾಸಣೆ ವೇಳೆ ಮಲೇಶಿಯಾದಿಂದ ಕೊರಿಯರ್‌ನಲ್ಲಿ ಬಂದಿದ್ದ 17 ಸ್ವೀಟ್ಸ್ ಬಾಕ್ಸ್‌ಗಳ ಮೇಲೆ ಅನುಮಾನವಾಯಿತು. ತಕ್ಷಣವೇ ಶಂಕಿತ ಬಾಕ್ಸ್‌ಗಳನ್ನು ತೆರೆದು ಪರೀಕ್ಷಿಸಿದಾಗ ಸಿಹಿಯಲ್ಲಿದ್ದ ‘ವಿಷ’ ಪತ್ತೆಯಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೌಲಾಲಂಪುರದ ಡ್ರಗ್ಸ್ ಮಾರಾಟಗಾರರು, ಚೆನ್ನೈಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಸಾಗಾಣಿಕೆ ಯತ್ನಿಸಿದ್ದರು. ಈ ಸಂಬಂಧ ಚೆನ್ನೈನ ಫೆಡ್‌ಎಕ್ಸ್ ಕೊರಿರ್ ಸಂಸ್ಥೆಯವರನ್ನು ವಶಕ್ಕೆ ಪಡೆದು ಕೊರಿಯರ್ ಮೂಲ ಕುರಿತು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಭಟ್ಕಳ ವ್ಯಕ್ತಿಯಿಂದ ಚಿನ್ನ ವಶ: ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆ ಬೇಧಿಸಿ ಬಂಗಾರ ಸಾಗಿಸಲು ಯತ್ನಿಸಿದ್ದ ಭಟ್ಕಳ ಮೂಲದ ವ್ಯಕ್ತಿಯೊಬ್ಬ ಸುಂಕದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಭಟ್ಕಳದ ಶಾಮಿಲ್ ಅಹಮದ್ ಬಂಧಿತನಾಗಿದ್ದು, ಆತನಿಂದ 15.13 ಲಕ್ಷ ಮೌಲ್ಯದ ಚಿನ್ನ ಕಾಡು ಕೋಣದ ಕೊಂಬು ಮಲೇಷ್ಯಾದಿಂದ ಅಕ್ರಮವಾಗಿ ಕಾಡುಕೋಣದ ಕೊಂಬು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸುಂಕದ ಅಧಿಕಾರಿಗಳಿಗೆ ಸೆರೆಯಾಗಿದ್ದಾನೆ.

ಬೆಂಗಳೂರಿನ ಮಂಜುನಾಥ್ ಬಂಧಿತನಾಗಿದ್ದು, ಆತನಿಂದ ಕಾಡುಕೋಣದ ಎರಡು ಕೊಂಬು ಜಪ್ತಿ ಮಾಡಲಾಗಿದೆ. ಹೊಸ ವರ್ಷಾಚರಣೆ ಮುಗಿಸಿಕೊಂಡು ಕೌಲಾಲಂಪುರದ ನಗರಕ್ಕೆ ಬಂದಿಳಿದ ಮಂಜುನಾಥ್, ಬಳಿಕ ಆತನ ಬ್ಯಾಗ್ ಪರಿಶೀಲಿಸಿದಾಗ ಕಾಡು ಕೋಣದ ಕೊಂಬುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಂಟೆ ದಂತಗಳು ಪತ್ತೆ ಬ್ಯಾಂಕಾಂಕ್‌ನಿಂದ ಒಂಟೆ ದಂತಗಳನ್ನು ತಂದ ತಪ್ಪಿಗೆ ಸತಿ-ಪತಿ ಈಗ ಜೈಲು ಪಾಲಾಗಿದ್ದಾರೆ. ಮೈಸೂರು ಮೂಲದ ಮೋಹನ್ ಹಾಗೂ ಪಿ.ದೇವತಿ ಬಂಧಿತರಾಗಿದ್ದು, ಅವರಿಂದ 71.26 ಕೆ.ಜಿ. ಒಂಟೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಈ ದಂಪತಿ, ಬ್ಯಾಂಕಾಂಕ್‌ನಿಂದ ಥಾಯ್ ಏರ್‌ಲೈನ್ಸ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಬಳಿಕ ನಿಲ್ದಾಣದಿಂದ ಹೊರ ಹೋಗುವಾಗ ದಂಪತಿ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಒಂಟೆ ದಂತಗಳು ಸಿಕ್ಕಿದ್ದವು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕಾಡು ಕೋಣದ ಕೊಂಬು ಬ್ಯಾಗ್‌ನಲ್ಲಿ ಬಂಗಾರ ಒಂಟೆ ದಂತಗಳು ಸ್ವೀಟ್ಸ್ ಬಾಕ್ಸ್‌ನಲ್ಲಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಹೊಸ ವರ್ಷದ ದಿನ ದುಬೈನಿಂದ ವಿಮಾನದಲ್ಲಿ ನಗರಕ್ಕೆ ಆಗಮಿಸಿದ ಅಹಮದ್, ವಿಮಾನ ನಿಲ್ದಾಣದ ಹೊರ ಹೋಗುವಾಗ ಆತನ ನಡವಳಿಕೆ ಮೇಲೆ ಅನುಮಾನವಾಯಿತು. ಕೂಡಲೇ ಆತನ ಬ್ಯಾಗ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಬುರ್ಖಾ, ಸೇರಿದಂತೆ ಇತರೆ ವಸ್ತುಗಳಲ್ಲಿ ಅಡಗಿಸಿಟ್ಟು ಚಿನ್ನ ತರುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!