ರಾಜ್ಯದಲ್ಲಿ ಭೀಕರ ಬರಗಾಲ- ಹನಿ ಹನಿ ನೀರಿಗೂ ಹಾಹಾಕಾರ!

By Chethan KumarFirst Published May 7, 2019, 10:00 PM IST
Highlights

ರಾಜ್ಯದಲ್ಲಿನ ಭೀಕರ ಬರಗಾಲ ಜನರು ಮಾತ್ರವಲ್ಲ, ಸಸ್ಯ ಸಂಕಲು ಹಾಗೂ ಪ್ರಾಣಿ ಸಂಕುಲದ ಬದುಕನ್ನೇ ಹೈರಾಣಾಗಿಸಿದೆ. ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಜಲಾಶಗಳು ಖಾಲಿಯಾಗಿದ್ದರೆ, ಅಂತರ್ಜಲ ಮಟ್ಟ ಬರಿದಾಗಿದೆ. ರಾಜ್ಯ ಭೀಕರ ಬರಗಾಲದ ವಿವರ ಇಲ್ಲಿದೆ.

ರಾಜ್ಯದ್ಯಂತ ಭೀಕರ ಬರಗಾಲ ಆವರಿಸಿದೆ. ಹಲವೆಡೆ ಮುಂಗಾರು ಮಳೆ ಸಿಂಚನವಾಗಿದ್ದರೂ, ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ವರುಣ ದೇವ ಸುಳಿದಿಲ್ಲ. ಇದರಿಂದ ಕೃಷಿ ಮಾತು ಪಕ್ಕಕ್ಕಿರಲಿ, ಕುಡಿಯುಲು, ಜಾನುವಾರುಗಳಿಗೂ ನೀರು ಇಲ್ಲದಂತಾಗಿದೆ. ಅಂತರ್ಜಲ ಬರಿದಾಗಿದೆ. ಜಲಾಶಯದಲ್ಲಿ ನೀರು ಇಲ್ಲದಾಗಿದೆ. ಇನ್ನು ಕೆರೆ ಬಾವಿ ಎರಡು ತಿಂಗಳ ಹಿಂದೆಯೇ ನೀರಿಲ್ಲದೆ ಒಣಗಿದೆ. ರಾಜ್ಯದ ಭೀಕರ ಬರಗಾಲ ವಿವರ ಇಲ್ಲಿದೆ.

ಚಿಕ್ಕಮಗಳೂರಿನ ಕಡೂರು ತಾಲೂಕು ದಶಕಗಳ ಬರಗಾಲದಿಂದ ಕಂಗೆಟ್ಟಿದೆ. ಬೆಳೆಗಳು ಒಣಗಿ ಹೋಗಿದ್ದು, ಕುಡಿಯುವ ನೀರಿಗಾಗಿ ಅಲೆದಾಟ ಶುರುವಾಗಿದೆ.

"

ಮೊದಲೇ ನೀರಿಲ್ಲದ ನಾಡಾಗಿರುವ ಚಿತ್ರದುರ್ಗ ಇದೀಗ ಅಕ್ಷರಶ ಒಣಗಿ ಹೋಗಿದೆ. ಇಲ್ಲಿನ ಜನರ ಮೂಲ ವಾಣಿವಿಲಾಸ ಸಾಗರ ಜಲಾಶಯ. ಆದರೆ ಈ ಭಾರಿ ಜಲಾಶಯದ ನೀರಿನ ಮಟ್ಟ  ಪಾತಾಳಕ್ಕೆ ಕುಸಿದಿದೆ.

"

ಬರಗಾಲದಿಂದ ತತ್ತರಿಸಿರುವ ಕೊಪ್ಪಳ ಇದೀಗ ಉರಿಬಿಸಿಲಿನಿಂದ ಕಾದ ಕಬ್ಬಿಣದಂತಾಗಿದೆ. ಒಂದೆಡೆ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದರೆ, ಇತ್ತ ರೈತರೂ ಬೆಳೆದ ಬೆಳಗಳು ಫಸಲಿಗೂ ಮುನ್ನವೇ ಒಣಗಿ ಹೋಗಿದೆ.

"

click me!