
ಕೊಪ್ಪಳ (ನ.20): ಕೊಪ್ಪಳದ 13ನೇ ವಾರ್ಡ್ ಜನ ಇವತ್ತು ಅಕ್ಷರಶಃ ಕೆರಳಿ ಕೆಂಡವಾಗಿದ್ದರು. ಯಾಕಂದರೆ, ಕುಡಿಯುವ ನೀರು ಬರಬೇಕಿದ್ದ ನಲ್ಲಿಯಲ್ಲಿ ಚರಂಡಿ ನೀರು ಬಂದಿದೆ.
13 ನೇ ವಾರ್ಡ್ ಕೋಟೆ ಏರಿಯಾದ ಹಲವೆಡೆ ಕೊಳಾಯಿಗಳಲ್ಲಿ ಕೆಲ ದಿನಗಳಿಂದ ದುರ್ವಾಸನೆಯ ನೀರು ಬರುತ್ತಿದೆ. ಬೆಳಗ್ಗೆಯೂ ನಲ್ಲಿಯಲ್ಲಿ ಕಲ್ಮಶ ನೀರು ಸರಬರಾಜು ಆಗಿದೆ. ಕೊಳಕು ಮಿಶ್ರಿತ ನೀರು ಬಿಟ್ಟಿರುವುದಕ್ಕೆ ನಗರಸಭೆ ವಿರುದ್ಧ ಸಾರ್ವಜನಿಕರು ಕೆಂಡಾಮಂಡಲವಾಗಿದ್ದಾರೆ.
ಪೈಪ್ ಒಡೆದ ಪರಿಣಾಮ ನಲ್ಲಿಯಲ್ಲಿ ಚರಂಡಿ ನೀರು ಬರುತ್ತಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶುದ್ಧ ನೀರು ಬೀಡಬೇಕು ಅಂತ ಸ್ಥಳೀಯರು ಬೀದಿಗಿಳಿದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.