ಮೂವರು ಸಚಿವಾಕಾಂಕ್ಷಿಗಳಿಗೆ ಕಾದಿದೆಯಾ ಬಿಗ್ ಶಾಕ್.? ಸಿಎಂ ಸಿದ್ದರಾಮಯ್ಯ ಪ್ಲಾನ್ ಏನು?

Published : Aug 25, 2017, 09:24 PM ISTUpdated : Apr 11, 2018, 12:54 PM IST
ಮೂವರು ಸಚಿವಾಕಾಂಕ್ಷಿಗಳಿಗೆ ಕಾದಿದೆಯಾ ಬಿಗ್ ಶಾಕ್.? ಸಿಎಂ ಸಿದ್ದರಾಮಯ್ಯ ಪ್ಲಾನ್ ಏನು?

ಸಾರಾಂಶ

* ಮಂತ್ರಿ ಸ್ಥಾನದ ಕನಸು ಕಂಡ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ * ಸಂಪುಟ ವಿಸ್ತರಣೆಗೆ ಹೈಕಮಾಂಡ್​ ನಿಂದ ಇನ್ನೂ ರೆಡ್​ ಸಿಗ್ನಲ್​​ * ಸಂಪುಟ ಸರ್ಕಸ್​ಗೆ ಹೈಕಮಾಂಡ್​​ ಭೇಟಿ ಮಾಡಿದ್ರೂ ಫೈನಲ್​ ಆಗಿಲ್ಲ * ಗೌರಿ-ಗಣೇಶಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಆಗಬೇಕಿತ್ತು * ಸಂಪುಟ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯಗೆ ಮನಸ್ಸು ಇಲ್ವಾ? * ಚುನಾವಣೆ ವರ್ಷದಲ್ಲಿ ಜೇನುಗೂಡಿಕೆ ಕೈ ಹಾಕದಿಸರಲು ಸಿಎಂ ನಿರ್ಧಾರ?

ಬೆಂಗಳೂರು(ಆ. 25): ಸಿದ್ದರಾಮಯ್ಯ ಸರಕಾರದಲ್ಲಿ ಮಂತ್ರಿ ಸ್ಥಾನದ ಕನಸು ಕಾಣುತ್ತಿರುವ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಸಂಪುಟ ವಿಸ್ತರಣೆಗೆ ಹೈಕಮಾಂಡ್​ ನಿಂದ ಇನ್ನೂ ಗ್ರೀನ್ ಸಿಗ್ನಲ್ಲ ಸಿಕ್ಕಿಲ್ಲ. ಆದ್ರಿಂದ ಸಂಪುಟ ವಿಸ್ತರಣೆ ಯಾವಾಗಾಗುತ್ತೋ? ಸರ್ಕಾರದ ಅವಧಿ ಮುಗಿಯುವ ಮುನ್ನ ಮಂತ್ರಿ ಆಗ್ತೀವೋ ಇಲ್ಲವೋ ಅನ್ನೋ ಗೊಂದಲದಲ್ಲಿದ್ದಾರೆ ಆಕಾಂಕ್ಷಿಗಳು. ಚುನಾವಣಾ ವರ್ಷದಲ್ಲಿ ಸಂಪುಟ ವಿಸ್ತರಣೆ ಮಾಡೋದು ಸಿದ್ದರಾಮಯ್ಯಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಖಾಲಿ ಇರುವ ಮೂರು ಸ್ಥಾನಗಳನ್ನ ತುಂಬುವಲ್ಲಿ ಬಹಳ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.

ಆಗಸ್ಟ್ 16ರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಸಂಬಂಧಪಟ್ಟಂತೆ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದರು. ಆ. 17ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಆದ್ರೆ ಹೈಕಮಾಂಡ್ ಇದೂವರೆಗೂ ವಿಸ್ತರಣೆಗೆ ದಿನಾಂಕ ಫಿಕ್ಸ್ ಮಾಡ್ತಿಲ್ಲ.

ಮುಖ್ಯ ವಿಚಾರ ಏನಂದರೆ, ಸಿದ್ದರಾಮಯ್ಯಗೂ ಸದ್ಯಕ್ಕೆ ಸಂಪುಟ ವಿಸ್ತರಣೆ ಮಾಡೋ ಮನಸ್ಸಿಲ್ಲವೆನ್ನಲಾಗಿದೆ. ಚುನಾವಣೆ ವರ್ಷದಲ್ಲಿ ಸುಖಾಸುಮ್ಮನೆ ಗೊಂದಲ ಸೃಷ್ಟಿ ಬೇಡ. ಖಾಲಿ ಇರೋದು ಮೂರು ಸ್ಥಾನ, ಆದ್ರೆ, ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಆದ್ರಿಂದ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡ್ತಿಲ್ಲ ಅಂತಾ ಹೇಳ್ತಾನೇ ಸಂಪುಟ ವಿಸ್ತರಣೆಯನ್ನು ಮುಂದಕ್ಕೆ ಹಾಕುವ ಜಾಣ್ಮೆಯನ್ನು ಸಿದ್ದರಾಮಯ್ಯ ಪ್ರದರ್ಶಿಸುತ್ತಿದ್ದಾರೆ ಅಂತ ಹೇಳಲಾಗ್ತಿದೆ.

ಮೂರು ಸಚಿವ ಸ್ಥಾನಗಳಿಗೆ ಕೆ.ಷಡಕ್ಷರಿ, ಆರ್.ಬಿ.ತಿಮ್ಮಾಪುರ ಮತ್ತು ಹೆಚ್.ಎಂ.ರೇವಣ್ಣ ಅವರ ಹೆಸರುಗಳು ಫೈನಲ್​​​ ಆಗಿವೆ. ಈ ಮೂವರಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಸಿಗದಂಥ ಪರಿಸ್ಥಿತಿ ಬರುತ್ತಾ ಎಂದು ಕಾದುನೋಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌
ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!